ಗಯಾನ: ಫ್ರೆಂಚ್ನ ಗಯಾನದಲ್ಲಿನ ಯುರೋಪಿಯನ್ ಲಾಂಚ್ ಸರ್ವಿಸ್ ಪ್ರೊವೈಡರ್-ಅರಿಯನ್ಸ್ಪೇಸ್ ರಾಕೆಟ್ ಮೂಲಕ ಬುಧವಾರ ಬೆಳಿಗ್ಗೆ, ಭಾರತದ ಆಧುನಿಕ ಸಂಪರ್ಕ ಉಪಗ್ರಹ ಜಿಸ್ಯಾಟ್-31ನನ್ನು ಯಶಸ್ವಿಯಾಗಿ ಉಡಾವಣೆಗೊಳಿಸಲಾಯಿತು.
ಗಯಾನ ಸಮೀಪ ಕೌರವುನಲ್ಲಿರುವ ಅರಿಯನ್ ಲಾಂಚ್ ಕಾಂಪ್ಲೆಕ್ಸ್ನಲ್ಲಿ, ಜಿಸ್ಯಾಟ್-31ನನ್ನು ಹೊತ್ತ ಅರಿಯನ್-5 ವಾಹಕ ಕಕ್ಷೆಯನ್ನು ಸೇರಿದೆ. 45 ನಿಮಿಷಗಳ ಸುಲಲಿತ ಪ್ರಯಾಣದ ಉಪಗ್ರಹ ಹೊತ್ತ ವಾಹಕ ನಿಗದಿತ ಕಕ್ಷೆಯನ್ನು ಸೇರುವಲ್ಲಿ ಯಶಸ್ವಿಯಾಗಿದೆ.
‘ಅರಿಯನ್-5 ವಾಹಕದ ಮೂಲಕ ಜಿಸ್ಯಾಟ್-31ನ್ನು ಅತ್ಯಂತ ಯಶಸ್ವಿಯಾಗಿ ಉಡಾವಣೆಗೊಳಿಸಿದ್ದು ನಮಗೆ ಅತೀವ ಸಂತೋಷವನ್ನು ತಂದಿದೆ. ಇದು 2019ರ ಇಸ್ರೋದ ಮೂರನೇ ಮಿಶನ್ ಆಗಿದೆ’ ಎಂದು ಇಸ್ರೋ ಸತೀಶ್ ಧವನ್ ಸ್ಪೇಸ್ ಸೆಂಟರ್ ನಿರ್ದೇಶಕ ಎಸ್ ಪಾಂಡಿಯನ್ ಅವರು ಕೌರವುನಲ್ಲಿ ಉಡಾವಣೆಯ ಬಳಿಕ ಅವರು ಹೇಳಿಕೆ ನೀಡಿದ್ದಾರೆ.
‘ಉಡಾವಣೆಯನ್ನು ಯಶಸ್ವಿಗೊಳಿಸಿದ ಮತ್ತು ಸೆಟ್ಲೈಟ್ನ್ನು ನಿಗದಿಯಂತೆ ಕಕ್ಷೆಗೆ ತಲುಪಿಸಿದ ಅರಿಯನ್ಸ್ಪೇಸ್ಗೆ ನಮ್ಮ ಅಭಿನಂದನೆಗಳು’ ಎಂದು ಅವರು ಹೇಳಿದ್ದಾರೆ.
ಜಿಸ್ಯಾಟ್-31 ಸುಮಾರು 2,355 ಕೆಜಿ ತೂಕವಿದ್ದು, ಕಕ್ಷೆಯಲ್ಲಿರುವ ಕೆಲವೊಂದು ಉಪಗ್ರಹಗಳಿಗೆ ಇದು ನಿರಂತರತೆಯನ್ನು ನೀಡಲಿದೆ. 15 ವರ್ಷಗಳ ಜೀವಿತಾವಧಿಯನ್ನು ಇದು ಹೊಂದಿದೆ.
ಜಿಸ್ಯಾಟ್ನ್ನು ವಿಸ್ಯಾಟ್ ನೆಟ್ವರ್ಕ್, ಟಿಲಿವಿಶನ್ ಅಪ್ಲಿಂಕ್, ಡಿಜಿಟಲ್ ಸೆಟ್ಲೈಟ್ ನ್ಯೂಸ್ ಸಂಗ್ರಹ, ಡಿಟಿಎಚ್ ಟೆಲಿವಿಶನ್ ಸರ್ವಿಸ್, ಸೆಲ್ಯೂಲರ್ ಬ್ಯಾಕ್ ಹೌಲ್ ಕನೆಕ್ಟಿವಿಟಿ ಮತ್ತು ಇತ್ಯಾದಿ ಅಪ್ಲಿಕೇಶನ್ಗಳ ಸಹಾಯಕ್ಕಾಗಿ ಬಳಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.