ಚಂಡೀಗಢ: ಫಾರ್ಮಸೆಟ್ಯೂಕಲ್ ಸೆಕ್ಟರ್ನಲ್ಲಿ ರೂ.2000 ಕೋಟಿಯಷ್ಟು ಹೂಡಿಕೆಯನ್ನು ತಂದು, 25 ಸಾವಿರದಷ್ಟು ಉದ್ಯೋಗವನ್ನು ಸೃಷ್ಟಿಸುವ ಉದ್ದೇಶದೊಂದಿಗೆ ಹರಿಯಾಣ ಸರ್ಕಾರ ‘ಹರಿಯಾಣ ಫಾರ್ಮಸೆಟ್ಯುಕಲ್ ಪಾಲಿಸಿ 2019’ನ್ನು ಜಾರಿಗೊಳಿಸುತ್ತಿದೆ.
ಈ ನೀತಿಯಡಿಯಲ್ಲಿ, ಕರ್ನಲ್ನಲ್ಲಿ ಸರ್ಕಾರಿ ಸ್ವಾಮ್ಯದ ಫಾರ್ಮ ಪಾರ್ಕ್ನ್ನು ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ ಮತ್ತು ಈ ವಲಯದ ಕೈಗಾರಿಕೆ, ಶೈಕ್ಷಣಿಕ ಸಂಸ್ಥೆ, ಸಂಶೋಧನೆ ಮತ್ತು ಅಭಿವೃದ್ಧಿ ಎಕೋಸಿಸ್ಟಮ್ನ್ನು ಸೃಷ್ಟಿಸಿ ಹರಿಯಾಣವನ್ನು ಫಾರ್ಮಸೆಟ್ಯೂಕಲ್ ಉತ್ಪಾದನೆಯ ಹಬ್ ಆಗಿ ಪರಿವರ್ತಿಸಲು ಮುಂದಾಗಿದೆ.
ಹೂಡಿಕೆದಾರ ಸ್ನೇಹಿ ಮತ್ತು ಸಮಯಕ್ಕೆ ಸರಿಯಾಗಿ ಅನುಮೋದನೆ ನೀಡುವಿಕೆ, ಸಮಗ್ರ ಔಷಧೀಯ ವಲಯ ಅಭಿವೃದ್ಧಿ, ಹಣಕಾಸು ಮತ್ತು ಆರ್ಥಿಕೇತರ ಲಾಭಗಳಿಗಾಗಿ ಘಟಕಗಳನ್ನು ಸ್ಥಾಪಿಸುವ ಮೂಲಕ ಫಾರ್ಮಾ ವಲಯದ ಮೇಲಿನ ನಿಯಂತ್ರಣಾತ್ಮಕ ವಾತಾವರಣವನ್ನು ಸಡಿಲಗೊಳಿಸುವತ್ತ ಹೆಚ್ಚಿನ ಗಮನವನ್ನು ಸರ್ಕಾರ ಹರಿಸಲಿದೆ.
ಮೀಸಲಿರಿಸಿದ ಮತ್ತು ಸುವ್ಯವಸ್ಥಿತ ರೀತಿಯಲ್ಲಿ, ರಾಜ್ಯದ ಉದ್ಯಮಿಗಳಿಗೆ ಬೆಂಬಲ ನೀಡಿ, ಗುಣಮಟ್ಟದ ಕೈಗಾರಿಕಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು, ಫಾರ್ಮಾ ಘಟಕಗಳನ್ನು ಸ್ಥಾಪಿಸಲು ವಾಣಿಜ್ಯೋದ್ಯಮಿಗಳಿಗೆ ಸಬ್ಸಿಡಿ ದರಗಳಲ್ಲಿ ಭೂಮಿಯನ್ನು ಒದಗಿಸುವುದು ಮತ್ತು ಒಂದು ಸಮಯ-ನಿಶ್ಚಿತ ರೀತಿಯಲ್ಲಿ ಅನುಮೋದನೆಗಳನ್ನು ಒದಗಿಸುವ ಸಲುವಾಗಿ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಮೆಕಾಣಿಸಂನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಹರಿಯಾಣದಲ್ಲಿ ಔಷಧೀಯ ಉದ್ಯಮದಲ್ಲಿನ ಹೊಸ ಹೂಡಿಕೆದಾರರಿಗೆ ನಿಯಂತ್ರಕ ಪ್ರಕ್ರಿಯೆಗಳನ್ನು ಸರಳಗೊಳಿಸುವ ಸಲುವಾಗಿ, ರಾಜ್ಯ ಸರ್ಕಾರವು HEPC (Invest Haryana- www.investharyana.in), ಎಂದು ಕರೆಯಲ್ಪಡುವ ಏಕೈಕ ವಿಂಡೋ ಪೋರ್ಟಲ್ ಹೊರ ತಂದಿದ್ದು, ಇದರೊಂದಿಗೆ ಎಲ್ಲಾ ಫಾರ್ಮಾ ವಲಯ ಸಂಬಂಧಿತ ಅನುಮೋದನೆಗಳನ್ನು ಸಂಯೋಜಿಸಲಿದೆ. ಇದರ ಮೂಲಕ ಸರಿಯಾದ ಸಮಯಕ್ಕೆ, ಸಂಪೂರ್ಣ ಆನ್ಲೈನ್ ಮತ್ತು ಸುವ್ಯವಸ್ಥಿತ ರೀತಿಯಲ್ಲಿ ಅನುಮತಿಗಳನ್ನು ಒದಗಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.