ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಕಾಶ ಸಂಸ್ಥೆ ಇಸ್ರೋ, ತನ್ನ 40ನೇ ಸಂಪರ್ಕ ಉಪಗ್ರಹ ಜಿಸ್ಯಾಟ್-31ನನ್ನು ಫೆಬ್ರವರಿ 6ರಂದು ಫ್ರೆಂಚ್ ಗಯಾನಾದ ಸ್ಪೇಸ್ಪೋರ್ಟ್ನಿಂದ ಉಡಾವಣೆಗೊಳಿಸಲು ಸರ್ವ ಸನ್ನದ್ಧವಾಗಿದೆ.
15 ವರ್ಷಗಳ ಜೀವಿತಾವಧಿಯನ್ನು ಹೊಂದಿರುವ ಈ ಉಪಗ್ರಹವು, ಕೆಲವೊಂದು ಕಕ್ಷೆಯಲ್ಲಿನ ಉಪಗ್ರಹಗಳ ಕಾರ್ಯಾಚರಣೆ ಸೇವೆಗಳಿಗೆ ನಿರಂತರತೆಯನ್ನು ಒದಗಿಸಲಿದೆ ಮತ್ತು ಜಿಯೋಸ್ಟೇಶನರಿ ಆರ್ಬಿಟ್ನಲ್ಲಿನ Ku-band ಟ್ರಾನ್ಸ್ಪಾಂಡರ್ ಸಾಮರ್ಥ್ಯವನ್ನು ವೃದ್ಧಿಸಲಿದೆ.
ಈ ಉಪಗ್ರಹವು 2,355 ಕೆಜಿ ತೂಕ ಇದೆ ಎಂದು ಇಸ್ರೋ ಹೇಳಿದ್ದು, ಗಯಾನಾದ ಕೌರೌನಲ್ಲಿನ ಅರಿಯನ್-5 ಮೂಲಕ ಉಡಾವಣೆಗೊಳ್ಳಲಿದೆ.
ಜಿಸ್ಯಾಟ್ನ್ನು ವಿಸ್ಯಾಟ್ ನೆಟ್ವರ್ಕ್, ಟಿಲಿವಿಶನ್ ಅಪ್ಲಿಂಕ್, ಡಿಜಿಟಲ್ ಸೆಟ್ಲೈಟ್ ನ್ಯೂಸ್ ಸಂಗ್ರಹ, ಡಿಟಿಎಚ್ ಟೆಲಿವಿಶನ್ ಸರ್ವಿಸ್, ಸೆಲ್ಯೂಲರ್ ಬ್ಯಾಕ್ ಹೌಲ್ ಕನೆಕ್ಟಿವಿಟಿ ಮತ್ತು ಇತ್ಯಾದಿ ಅಪ್ಲಿಕೇಶನ್ಗಳ ಸಹಾಯಕ್ಕಾಗಿ ಬಳಸಬಹುದಾಗಿದೆ.
ಇಸ್ರೊ ಉಡಾಯಿಸುತ್ತಿರುವ ಅತಿ ತೂಕದ ಉಪಗ್ರಹಗಳಲ್ಲಿ ಇದು ಒಂದಾಗಿದ್ದು ದೇಶದಲ್ಲಿ ಸಂವಹನ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಕಳೆದ ಜನವರಿ 24ರಂದು ಪಿಎಸ್ಎಲ್ ವಿ ಸಿ-44 ನ್ನು ಉಡಾಯಿಸಿದ ನಂತರ ಇಸ್ರೊ 2019ರಲ್ಲಿ ಉಡಾಯಿಸುತ್ತಿರುವ ಎರಡನೇ ಉಪಗ್ರಹ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.