ನವದೆಹಲಿ: ಭಾರತೀಯ ಮಾರುಕಟ್ಟೆಗೆ ಚೀನಾದ ಕಡಿಮೆ ಬೆಲೆಯ ಸರಕುಗಳು ಮೂಟೆ ಗಟ್ಟಲೆ ಬಂದು ಬೀಳುವುದನ್ನು ಕಡಿಮೆ ಮಾಡುವ ಸಲುವಾಗಿ ನರೇಂದ್ರ ಮೋದಿ ಸರ್ಕಾರ ಸುಮಾರು 99 ಚೀನಾ ವಸ್ತುಗಳ ಮೇಲೆ ಆಮದು ನಿರೋಧಕ ಸುಂಕ (ಯ್ಯಾಂಟಿ ಡಂಪಿಂಗ್ ಡ್ಯೂಟಿ)ಯನ್ನು ವಿಧಿಸಿದೆ.
‘ಜನವರಿ 28ರಿಂದ ಅನುಷ್ಠಾನಕ್ಕೆ ಬರುವಂತೆ ಚೀನಾದ 99 ವಸ್ತುಗಳಿಗೆ ಆಮದು ನಿರೋಧಕ ಸುಂಕವನ್ನು ವಿಧಿಸಲಾಗಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸಿ,ಆರ್ ಚೌಧುರಿಯವರು ಲೋಕಸಭೆಗೆ ಸೋಮವಾರ ಮಾಹಿತಿ ನೀಡಿದ್ದಾರೆ.
ಕೆಮಿಕಲ್ಸ್, ಪೆಟ್ರೋಕೆಮಿಕಲ್ಸ್, ಫೈಬರ್, ಯಾರ್ನ್, ಮೆಶಿನರಿ ಐಟಂ, ಫಾರ್ಮಸೆಟ್ಯುಕಲ್, ರಬ್ಬರ್, ಸ್ಟೀಲ್ ಐಟಂ ಇತ್ಯಾದಿ ಚೀನಾ ವಸ್ತುಗಳಿಗೆ ಸುಂಕವನ್ನು ವಿಧಿಸಲಾಗಿದೆ.
ವಿದೇಶಿಗಳಿಂದ ಆಗಮಿಸುವ ಅಗ್ಗದ ವಸ್ತುಗಳು ದೇಶೀಯ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪ್ರಭಾವವನ್ನು ಬೀರಬಾರದು ಎಂಬ ಉದ್ದೇಶದೊಂದಿಗೆ ವಿದೇಶಿ ವಸ್ತುಗಳಿಗೆ ಆಮದು ನಿರೋಧಕ ಸುಂಕಗಳನ್ನು ವಿಧಿಸಲಾಗುತ್ತದೆ.
ಸಮರ್ಪಕ ಮಾರುಕಟ್ಟೆ ವಿಧಾನ ಮತ್ತು ಭಾರತೀಯ ವ್ಯಾಪಾರಿಗಳ ಹಿತಾಸಕ್ತಿ ಕಾಪಾಡುವ ಉದ್ದೇಶದೊಂದಿಗೆ ಮೋದಿ ಸರ್ಕಾರ ಚೀನಿ ವಸ್ತುಗಳಿಗೆ ಈ ಹೆಚ್ಚುವರಿ ಸುಂಕವನ್ನು ವಿಧಿಸಿದೆ. ಇದರಿಂದ ಕಡಿಮೆ ಬೆಲೆಯ ಚೀನಿ ವಸ್ತುಗಳು ಭಾರತದ ಮಾರುಕಟ್ಟೆಗೆ ಬಂದು ರಾಶಿ ಬೀಳುವುದು ತಪ್ಪುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.