ಹೈದರಾಬಾದ್: 10ನೇ ತರಗತಿಯ ಬಳಿಕ ಶಿಕ್ಷಣವನ್ನು ಮುಂದುವರೆಸದಿದ್ದರೂ, ರಸ್ತೆ ಅಪಘಾತ ತಡೆಯುವ ನಿಟ್ಟಿನಲ್ಲಿ ಹೊಸ ಸ್ಮಾರ್ಟ್ ವ್ಯವಸ್ಥೆಯನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಹೈದರಾಬಾದ್ನ 22 ವರ್ಷದ ಯುವಕ ಸಾಯಿ ತೇಜಾ.
ವಾಹನ ಚಾಲಕರು ಅಲ್ಕೋಹಾಲ್ ಸೇವನೆ ಮಾಡಿರುವುದನ್ನು ಪತ್ತೆ ಹಚ್ಚಿ, ಅದಕ್ಕೆ ಅನುಗುಣವಾಗಿ ವಾಹನದ ಎಂಜಿನನ್ನು ನಿಯಂತ್ರಿಸುವ ಸ್ಮಾರ್ಟ್ ವಿಧಾನವನ್ನು ಸಾಯಿ ಕಂಡು ಹಿಡಿದಿದ್ದಾರೆ. ಈ ವಿಧಾನ ಮುಂಬರುವ ದಿನಗಳಲ್ಲಿ ಡ್ರಂಕ್ ಆಂಡ್ ಡ್ರೈವ್ನಿಂದಾಗುವ ಅಪಘಾತಗಳನ್ನು ಗಣನೀಯ ಮಟ್ಟದಲ್ಲಿ ಇಳಿಕೆ ಮಾಡಬಲ್ಲದು ಎಂಬ ಭರವಸೆ ಎಲ್ಲರಿಗೂ ಮೂಡಿದೆ.
ಚಾಲಕ ಮದ್ಯ ಸೇವನೆ ಮಾಡಿದ್ದಾನೆಯೇ ಅಥವ ಇಲ್ಲವೇ ಎಂಬುದನ್ನು ಸಾಯಿ ಅಭಿವೃದ್ಧಿಪಡಿಸಿರುವ ಡಿಟೆಕ್ಟರ್ ಪತ್ತೆ ಹಚ್ಚುತ್ತದೆ. ಅಲ್ಲದೇ ಅದಕ್ಕೆ ಅನುಗುಣವಾಗಿ ವಾಹನದ ಎಂಜಿನನ್ನು ನಿಯಂತ್ರಿಸುತ್ತದೆ. ಮಾತ್ರವಲ್ಲ, ಕಾನ್ಫಿಗರ್ಡ್ ಆದ ನಂಬರ್ಸ್ಗೆ ಚಾಲಕನ ಸ್ಥಿತಿಯ ಬಗ್ಗೆ ಎಸ್ಎಂಎಸ್ನ್ನೂ ಈ ಡಿಟೆಕ್ಟರ್ ಕಳುಹಿಸಿಕೊಡುತ್ತದೆ.
‘ಕೆಲವೊಂದು ಕಾರಣಗಳಿಂದಾಗಿ ಶಿಕ್ಷಣವನ್ನು ಹತ್ತನೇ ತರಗತಿಯಲ್ಲೇ ನಿಲ್ಲಿಸಬೇಕಾಯಿತು. ಆದರೆ ನನಗೆ Electronics ಬಗ್ಗೆ ಆಸಕ್ತಿ ಇತ್ತು ಮತ್ತು ನಾನು ಇಂಟರ್ನೆಟ್ನಿಂದ ಹಲವಾರು ಜ್ಞಾನಗಳನ್ನು ಸಂಪಾದಿಸಿಕೊಂಡಿದ್ದೇನೆ. ಕೋಡಿಂಗ್ ಕೂಡ ಕಲಿತಿದ್ದೇನೆ ಮತ್ತು ವಾಹನ ಚಾಲಕ ಶೇ.30ಕ್ಕಿಂತ ಹೆಚ್ಚು ಆಲ್ಕೋಹಾಲ್ ಕುಡಿದಿದ್ದರೆ, ವಾಹನದ ಎಂಜಿನನ್ನು ನಿಯಂತ್ರಿಸುವ ಹೊಸ ಆಲ್ಕೋಹಾಲ್ ಡಿಟೆಕ್ಟರ್ನ್ನು ಅಭಿವೃದ್ಧಿಪಡಿಸಿದ್ದೇನೆ’ ಎಂದು ಸಾಯಿ ಹೇಳುತ್ತಾರೆ.
ತಮ್ಮ ಡಿಟೆಕ್ಟರ್ ಬಗ್ಗೆ ಇನ್ನಷ್ಟು ಮಾಹಿತಿ ನೀಡಿರುವ ಅವರು, ‘ಡಿವೈಸ್ನಲ್ಲಿ ವಾಹನದ ನಂಬರ್ನೊಂದಿಗೆ ಮೈಕ್ರೋ ಕಂಟ್ರೋಲರ್ ಮೂಲಕ ಸೇವ್ ಮಾಡಲಾದ ಫೋನ್ ನಂಬರ್ಗೆ ಟೆಕ್ಸ್ಟ್ ಎಸ್ಎಂಎಸ್ನ್ನು ಇದು ಕಳುಹಿಸಿಕೊಡುತ್ತದೆ. ಈ ಡಿವೈಸ್ ಕಂಡುಹಿಡಿಯಲು 15 ದಿನಗಳನ್ನು ವ್ಯಯಿಸಿದ್ದೇನೆ, 2500 ರೂಪಾಯಿಯಲ್ಲಿ ಡಿವೈಸ್ ರಚನೆ ಮಾಡಿದ್ದೇನೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.