ನವದೆಹಲಿ: ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಪ್ರಯುಕ್ತ ದೆಹಲಿಯ ಕೆಂಪುಕೋಟೆಯಲ್ಲಿ ಆಯೋಜನೆಗೊಳಿಸಲಾಗಿದ್ದ ‘ಭಾರತ್ ಪರ್ವ್ 2019’ ಜನವರಿ 31ರಂದು ಸಮಾಪಣಗೊಂಡಿದೆ. ಈ ಕಾರ್ಯಕ್ರಮ ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಎಂಬ ಪರಿಕಲ್ಪನೆಯ ಸ್ಫೂರ್ತಿಯನ್ನು ಜಗತ್ತಿಗೆ ತೋರಿಸಿದೆ.
ಜ.26ರಿಂದ ಜ.31ರವರೆಗೆ ಪ್ರವಾಸೋದ್ಯಮ ಸಚಿವಾಲಯವು ಕೆಂಪು ಕೋಟೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆಗೊಳಿಸಿತ್ತು, ದೇಶದ ಮೂಲೆ ಮೂಲೆಯಿಂದ ಅಪಾರ ಜನರು ಇಲ್ಲಿಗೆ ಆಗಮಿಸಿದ್ದರು. ಭಾರತೀಯ ಸಂಸ್ಕೃತಿಯ ಭವ್ಯ ಪರಂಪರೆ ಇಲ್ಲಿ ಅನಾವರಣಗೊಂಡಿತ್ತು. 8 ಈಶಾನ್ಯ ರಾಜ್ಯಗಳು ಪ್ರವಾಸೋದ್ಯಮ ವಸ್ತುಗಳೊಂದಿಗೆ ಇಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದವು.
ಎಲ್ಲಾ ರಾಜ್ಯಗಳನ್ನು ಒಂದು ಸೂರಿನಡಿ ತಂದು ಅವುಗಳ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದು ಮಾತ್ರವಲ್ಲ, ರಾಜ್ಯಗಳ ನಡುವಣ ಶಾಂತಿ, ಸೌಹಾರ್ದತೆ, ಒಗ್ಗಟ್ಟನ್ನು ಕೂಡ ಈ ಕಾರ್ಯಕ್ರಮ ಪ್ರತಿಬಿಂಬಿಸಿದೆ.
ಗುಜರಾತಿನಲ್ಲಿನ ಏಕತಾ ಪ್ರತಿಮೆಯ ಪ್ರತಿಬಿಂಬವನ್ನು ಇಲ್ಲಿ ರೂಪಿಸಿಲಾಗಿತ್ತು, ಇದು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು ಆಗಿತ್ತು.
ವೈವಿಧ್ಯ ಕರಕುಶಲ, ಕೈಮಗ್ಗಗಳ ಪ್ರದರ್ಶನವನ್ನೂ ಇಲ್ಲಿ ಏರ್ಪಡಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.