ವಾಷಿಂಗ್ಟನ್: ”ಪೇ ಆಂಡ್ ಸ್ಟೇ” ಯೂನಿವರ್ಸಿಟಿ ವೀಸಾ ಹಗರಣದಲ್ಲಿ ಅಮೆರಿಕಾದಲ್ಲಿ ಬಂಧನಕ್ಕೊಳಗಾಗಿರುವ 129 ಭಾರತೀಯ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಕಾನೂನು ನೆರವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿರುವ ಭಾರತ, ಅಲ್ಲಿನ ತನ್ನ ರಾಯಭಾರ ಕಛೇರಿಯಲ್ಲಿ 24×7 ಹಾಟ್ಲೈನ್ನನ್ನು ಆರಂಭ ಮಾಡಿದೆ.
ನಕಲಿ ವಿಶ್ವವಿದ್ಯಾಲಯದಲ್ಲಿ ದಾಖಲಾತಿ ಮಾಡಿಕೊಂಡು ಅಮೆರಿಕಾದಲ್ಲಿ ಕಾನೂನು ಬಾಹಿರವಾಗಿ ನೆಲೆಸಿದ್ದ 129 ಭಾರತೀಯರನ್ನು ಬಂಧನಕ್ಕೊಳಪಡಿಸಲಾಗಿದೆ.
ಇದೀಗ ಈ ವಿದ್ಯಾರ್ಥಿಗಳಿಗೆ ಕಾನೂನು ನೆರವನ್ನು ನೀಡಲು, ಭಾರತೀಯ ರಾಯಭಾರ ಕಛೇರಿ 202-322-1190 ಮತ್ತು 202-340-2590 ಹಾಟ್ಲೈನ್ ನಂಬರ್ ತೆರೆದಿದೆ.
ಬಂಧಿತ ವಿದ್ಯಾರ್ಥಿಗಳು ತಮ್ಮ ಕುಟುಂಬ ಮತ್ತು ಸ್ನೇಹಿತರನ್ನು cons3.Washington@mea.Gov.In.ಮೂಲಕ ಸಂಪರ್ಕಿಸಬಹುದಾಗಿದೆ.
ಇನ್ನೊಂದೆಡೆ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸಲುವಾಗಿ ನೋಡಲ್ ಆಫೀಸರ್ಸ್ಗಳನ್ನೂ ಭಾರತ ನಿಯೋಜಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.