ನವದೆಹಲಿ: ಇನ್ನೂರು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಆಡಿದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಮಿಥಾಲಿ ರಾಜ್. ಪ್ರಸ್ತುತ ನ್ಯೂಜಿಲ್ಯಾಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಪಂದ್ಯ ಅವರು ಪಾಲ್ಗೊಳ್ಳುತ್ತಿರುವ 200ನೇ ಪಂದ್ಯವಾಗಿದೆ.
36 ವರ್ಷದ ಮಿಥಾಲಿ, 1999ರಲ್ಲಿ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. 19 ವರ್ಷ ಮತ್ತು 219 ದಿನಗಳ ಕ್ರಿಕೆಟ್ ಸೇವೆಯನ್ನು ಅವರು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ.
ಪುರುಷ ಕ್ರಿಕೆಟಿಗರಿಗೆ ಹೋಲಿಸಿದರೂ, ಮಿಥಾಲಿ ನಾಲ್ಕನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಸಚಿನ್ ತೆಂಡೂಲ್ಕರ್, ಸನತ್ ಜಯಸೂರ್ಯ ಮತ್ತು ಜಾವೆದ್ ಮಿಯಾಂನಂದ್ಗಿಂತ ಹಿಂದಿದ್ದಾರೆ ಅಷ್ಟೇ.
ವಿಶೇಷವೆಂದರೆ, ಭಾರತೀಯ ಮಹಿಳಾ ಕ್ರಿಕೆಟ್ ತಂಡ ಇತಿಹಾಸದಲ್ಲಿ ಒಟ್ಟು 263 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದೆ. ಇದರಲ್ಲಿ 200 ಪಂದ್ಯಗಳಲ್ಲಿ ಮಿಥಾಲಿ ಭಾಗಿಯಾಗಿದ್ದಾರೆ.
ಅತ್ಯಧಿಕ ರನ್ ಪಡೆದ ಮಹಿಳಾ ಕ್ರಿಕೆಟರ್ ಕೂಡ ಈಕೆಯೇ ಆಗಿದ್ದು, 6613 ರನ್ ಇದುವರೆಗೆ ಪಡೆದುಕೊಂಡಿದ್ದಾರೆ, ಇದರಲ್ಲಿ 7 ಶತಕಗಳು, 52 ಅರ್ಧ ಶತಕಗಳು ಸೇರಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.