ನವದೆಹಲಿ: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮತ್ತೆ 4,78,670 ಮನೆಗಳ ನಿರ್ಮಾಣಕ್ಕೆ ಅನುಮೋದನೆಯನ್ನು ನೀಡಿದೆ.
ಕೇಂದ್ರ ಅನುಮೋದನೆ ಮತ್ತು ಪರಿಶೀಲನಾ ಸಮಿತಿಯ 42ನೇ ಸಭೆಯಲ್ಲಿ ಈ ಅನುಮೋದನೆಯನ್ನು ನೀಡಲಾಗಿದೆ. ಈ ಹಿನ್ನಲೆಯಲ್ಲಿ ಒಟ್ಟು ಯೋಜನೆಯಡಿ ನಿರ್ಮಾಣವಾಗುತ್ತಿರುವ ಒಟ್ಟು ಮನೆಗಳ ಸಂಖ್ಯೆ 72,65,763ಕ್ಕೆ ಏರಿಕೆಯಾಗಿದೆ.
ಆಂಧ್ರಪ್ರದೇಶಕ್ಕೆ 1,05,956 ಮನೆಗಳು ಅನುಮೋದನೆಗೊಂಡಿದೆ, ಪಶ್ಚಿಮ ಬಂಗಾಳಕ್ಕೆ 1,02,895 ಮನೆಗಳು ಅನುಮೋದನೆಗೊಂಡಿವೆ. ಉತ್ತರಪ್ರದೇಶಕ್ಕೆ 91, 689 ಮನೆಗಳು, ತಮಿಳುನಾಡಿಗೆ 98,110 ಮನೆಗಳು ಅನುಮೋದನೆಗೊಂಡಿದೆ.
ರೂ.22,492 ಕೋಟಿ ಮೊತ್ತದ 940 ಯೋಜನೆಗಳು ಅನುಮೋದನೆಗೊಂಡಿದೆ. ಇದಕ್ಕೆ ಕೇಂದ್ರ ಸರ್ಕಾರದ ವತಿಯಿಂದ ರೂ.7,180 ಕೋಟಿ ಅನುದಾನ ಸಿಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.