ಮಂಗಳೂರು : ಆಕಾಶವಾಣಿಯ ತುಳು ಕಾರ್ಯಕ್ರಮದಲ್ಲಿ ನಾಳೆ (ಮಾರ್ಚ್ 31ರಂದು) ಸಾಯಂಕಾಲ 6-15 ಗಂಟೆಗೆ ಸರ್ವೊತ್ತಮ ಪ್ರಶಸ್ತಿ ವಿಜೇತರಾದ ಮಂಗಳೂರು ಸರ್ಕ್ಯೂಟ್ ಹೌಸ್ನ ಕೃಷ್ಣ ಅವರು ಭಾಗವಹಿಸಲಿದ್ದಾರೆ.
ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಇವರು ‘ಅನ್ನದಾತ ಕೃಷ್ಣಣ್ಣ’ ನೆಂದೆ ಖ್ಯಾತರಾದವರು. ಸರ್ಕ್ಯೂಟ್ ಹೌಸ್ನ ಅಡುಗೆ ವೃತ್ತಿಯಾದರೂ ಇವರು ಮುಖ್ಯಮಂತ್ರಿಗಳಿಗೆ, ನ್ಯಾಯಮೂರ್ತಿಗಳಿಗೆ, ಪೋಲೀಸ್ ಅಧಿಕಾರಿಗಳಿಗೆ ರಾಜಕೀಯ ಧುರೀಣರಿಗೆ ಆತ್ಮೀಯರು. ಪ್ರಧಾನಿಗಳಾಗಿದ್ದ ಇಂದಿರಾಗಾಂಧಿ, ನರಸಿಂಹರಾವ್ ಮನಮೋಹನ್ಸಿಂಗ್, ರಾಷ್ಟ್ರಪತಿಗಳಾದ ಶಂಕರದಯಾಳ್ ಶರ್ಮ ಮುಂತಾದ ಗಣ್ಯಾತಿಗಣ್ಯರಿಗೆ ರುಚಿಯಾದ ಊಟ ಬಡಿಸಿದ ಹೆಗ್ಗಳಿಕೆ ಇವರದು.
ಗಣ್ಯರ ಪರಿಚಯವನ್ನು ಸೇವೆಗೆ ಬಳಸಿದ ಇವರು ಅನೇಕ ಬಡ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವಲ್ಲಿ ನೆರವಾಗಿದ್ದಾರೆ. ಸರಕಾರಿ ಹಾಗೂ ಪೋಲೀಸ್ ಇಲಾಖೆಗಳಲ್ಲಿ ಉದ್ಯೋಗ ದಲ್ಲಿರುವ ಹಲವರು ಇವರ ಹೆಸರನ್ನು ಸ್ಮರಿಸುತ್ತಾರೆ. ಪ್ರಾಣಿಪ್ರೇಮ ಇವರ ಇನ್ನೊಂದು ಹವ್ಯಾಸ, ಜ.31ಕ್ಕೆ ನಿವೃತ್ತಿಯಾದ ಇವರು ಈಗಲೂ ಬೇಡಿಕೆಯ ಬಾಣಸಿಗ. ಸರಳ ಸಜ್ಜನಿಕೆಯ ಸೇವಾ ಮನೋಭಾವದ ಇವರ ಜೀವನಾನುಭವದ ಕುರಿತು ಕಾರ್ಯಕ್ರಮ ನಿರ್ವಾಹಕರಾದ ನವೀನ್ ಕುಮಾರ್ ಕದ್ರಿಯವರು ಸಂದರ್ಶನ ಮಾಡಿದ್ದಾರೆ .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.