ಸುಬ್ರಹ್ಮಣ್ಯ: ಯೋಗದ ಮೂಲಕ ಮನಸ್ಸು ಹಾಗೂ ದೇಹವನ್ನು ನಿಯಂತ್ರಣ ಮಾಡುವ ಮೂಲಕ ಸ್ಥಿತ ಪ್ರಜ್ಞನಾಗಿ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಿದೆ. ಈ ಮೂಲಕ ಆತ್ಮಸಾಕ್ಷಾತ್ಕಾರ ಸಾಧ್ಯ ಎಂದು ಯೋಗ ಗುರು ಶ್ರೀಧರ ಮಡಿಯಾಲ ಹೇಳಿದರು.
ಅವರು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಗುತ್ತಿಗಾರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ನಡೆದ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಯೋಗ ಸಿಡಿ ಬಿಡುಗಡೆಗೊಳಿಸಿ ಮಾತನಾಡಿದರು. ದೇಶದಲ್ಲೇ ಪತಂಜಲಿ ಮೂಲಕ ಹುಟ್ಟಿಕೊಂಡು ಇಂದು ಜಗತ್ತಿಗೆ ಪಸರಿಸಿದ್ದಾರೆ ಹೀಗಾಗಿ ಭಾರತದ ಎಲ್ಲರೂ ಯೋಗದ ಮೂಲಕ ರೋಗ ಮುಕ್ತ ಬದುಕು ಸಾಗಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ವೆಂಕಟ್ ದಂಬೆಕೋಡಿ, ದೇಶದಲ್ಲೇ ಇಂದು ವಿಶೇಷವಾದ ದಿನ. ಪ್ರಧಾನಿ ಕರೆಗೆ 192 ದೇಶದ ಜನತೆ ಸ್ಪಂದಿಸಿ ಯೋಗವನ್ನು ಆರಂಭಿಸಿದ್ದಾರೆ. ಹೀಗಾಗಿ ಇಂದು ಪ್ರತಿಯೊಬ್ಬನ ಹೆಮ್ಮೆಯ ದಿನ ಇದಾಗಿದೆ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಶಕ್ತಿಕೇಂದ್ರದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ, ಶಾರೀರಿಕವಾಗಿ , ಮಾನಸಿಕವಾಗಿ ದೇಹದ ನಿಯಂತ್ರಣ ಮಾಡಿ ಉತ್ತಮವಾದ ಬದುಕಿಗೆ ಎಲ್ಲರೂ ಮುಂದಡಿ ಇಡಬೇಕಾಗಿದೆ. ಸಮಾಜಕ್ಕೆ ಯೋಗದ ಅವಶ್ಯಕತೆ ಇದೆ ಎಂದರು.ವೇದಿಕೆಯಲ್ಲಿ ಬಿಜೆಪಿ ತಾಲೂಕು ಉಪಾಧ್ಯಕ್ಷ ವೆಂಕಟ್ ವಳಲಂಬೆ ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ವೆಂಕಟ್ ದಂಬೆಕೋಡಿ ಸ್ವಾಗತಿಸಿ ಶಕ್ತಿಕೇಂದ್ರದ ಕಾರ್ಯದರ್ಶಿ ರಮಾನಂದ ಎಣ್ಣೆಮಜಲು ವಂದಿಸಿದರು. ಕಿಶೋರ್ ಕುಮಾರ್ ಪೈಕ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಯೋಗಾಸನ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.