ನವದೆಹಲಿ: ಉಡೆ ದೇಶ್ ಕ ಆಮ್ ನಾಗರಿಕ್(ಉಡಾನ್) ಯೋಜನೆಯಡಿ, ಮೋದಿ ಸರ್ಕಾರ 11 ಆಪರೇಟರ್ಗಳಿಗೆ 234 ಮಾರ್ಗಗಳನ್ನು ಒದಗಿಸಿಕೊಟ್ಟಿದೆ. ಇದು ಪ್ರಾದೇಶಿಕ ಸಂಪರ್ಕ ಯೋಜನೆಯ ಮೂರನೇ ಹಂತವಾಗಿದೆ ಮತ್ತು ಇದರಡಿ 16 ಅನ್ಸರ್ವ್ಡ್, 17 ಅಂಡರ್ ಸರ್ವ್ಡ್ ಏರ್ಡ್ರೋಮ್ಸ್ಗಳು 89 ವಿಮಾನನಿಲ್ದಾಣಗಳೊಂದಿಗೆ ಕನೆಕ್ಟ್ ಆಗಲಿದೆ,
ಹಿಮಾಚಲ ಪ್ರದೇಶದ ಹಿಮ ಪ್ರದೇಶದ, ಉತ್ತರಾಖಂಡ, ಜಮ್ಮು ಕಾಶ್ಮೀರ, ಈಶಾನ್ಯ ರಾಜ್ಯಗಳ ಪ್ರವಾಸಿ ತಾಣಗಳು ಉಡಾನ್ ಯೋಜನೆಯಡಿ ವಾಯು ಸಂಪರ್ಕವನ್ನು ಪಡೆದುಕೊಳ್ಳಲಿದೆ. ಕೆಲವು ತಾಣಗಳ ಸಂಪರ್ಕಕ್ಕೆ ಪ್ರವಾಸೋದ್ಯಮ ಸಚಿವಾಲಯವೇ ಹಣಕಾಸು ಒದಗಿಸಲಿದೆ.
ಕೆಲವೊಂದು ಅಂತಾರಾಷ್ಟ್ರೀಯ ವಿಮಾನಗಳೂ ಉಡಾನ್ ಯೋಜನೆಯಡಿ ಹಾರಾಡಲಿವೆ. ಸ್ಪೈಸ್ಜೆಟ್ ಗುವಾಹಟಿಯಿಂದ ಧಾಕಾ ಮತ್ತು ಬ್ಯಾಂಕಾಕ್ಗೆ ಹಾರಲಿದೆ.
ರಾಜಸ್ಥಾನ ಈ ಯೋಜನೆಯಡಿ 12 ಏರ್ಪೋರ್ಟ್, ಗುಜರಾತ್ ಮತ್ತು ಮಹಾರಾಷ್ಟ್ರ ತಲಾ 9 ಏರ್ಪೋರ್ಟ್, ಚಂಡೀಗಢ, ಗೋವಾ, ಹರಿಯಾಣ, ಮೇಘಾಲಯ, ಉತ್ತರಾಖಂಡ ತಲಾ ಒಂದು ಏರ್ಪೋರ್ಟ್, ಛತ್ತಿಸ್ಗಢ, ದೆಹಲಿ, ಜಮೆಮು ಕಾಶ್ಮೀರ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ತಮಿಳುನಾಡು, ತ್ರಿಪುರಾ ತಲಾ ಎರಡು ಏರ್ಪೋರ್ಟ್ಗಳನ್ನು ಪಡೆಯಲಿವೆ.
ಮೂರನೇ ಹಂತದ ಉಡಾನ್ ಯೋಜನೆ 69.30 ಲಕ್ಷ ಸೀಟುಗಳ ಸಾಮರ್ಥ್ಯ ಹೊಂದುವ ನಿರೀಕ್ಷೆ ಇದೆ, ಇದಕ್ಕಾಗಿ ಸರ್ಕಾರ ವಾರ್ಷಿಕ 1,167 ಕೋಟಿ ವ್ಯಯಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.