ನವದೆಹಲಿ: ಬಡವರಿಗಾಗಿ ಸರ್ಕಾರ ಆರಂಭಿಸಿರುವ ವಸತಿ ಯೋಜನೆಗಳನ್ನು ಅನರ್ಹರು ದುರ್ಬಳಕೆ ಮಾಡಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ. ಆದರೆ ಎನ್ಡಿಎ ಸರ್ಕಾರ ಇಂತಹವರ ವಿರುದ್ಧ ಕಠಿಣ ನಿಲುವನ್ನು ಹೊಂದಿದ್ದು, ನಕಲಿ ಫಲಾನುಭವಿಗಳ ವಿರುದ್ಧ ಸಮರ ಸಾರಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ, ಸುಳ್ಳು ದಾಖಲೆಯನ್ನು ನೀಡಿ ವಸತಿ ಪಡೆದುಕೊಂಡ ಉತ್ತರಪ್ರದೇಶದ ಸುಮಾರು 8,500 ನಕಲಿ ಫಲಾನುಭವಿಗಳಿಂದ ರೂ.6.5 ಕೋಟಿಗಳನ್ನು ಸರ್ಕಾರ ಹಿಂಪಡೆದುಕೊಂಡಿದೆ. ಈ ಹಣವನ್ನು ಬಡವರಿಗೆ ಮನೆ, ಶೌಚಾಲಯ ನಿರ್ಮಾಣ ಮಾಡಲು ನೀಡಲಾಗುತ್ತಿದೆ.
ದೇಶದ ಅತೀಹೆಚ್ಚು ಜನಸಂಖ್ಯೆವುಳ್ಳ ಉತ್ತರಪ್ರದೇಶದಲ್ಲಿ, ಕಳೆದ ಎರಡೂವರೆ ವರ್ಷದಲ್ಲಿ ವಸತಿ ಯೋಜನೆಯ 8,500 ನಕಲಿ ಫಲಾನುಭವಿಗಳನ್ನು ಪತ್ತೆ ಮಾಡಲಾಗಿದೆ. ಇವರಲ್ಲಿ ಬಹುತೇಕರು ಪುಕ್ಕಾ ಮನೆಗಳನ್ನು ಹೊಂದಿದ್ದರು. ಅವರಿಗೆ ದಂಡ ವಿಧಿಸಿ ರೂ.6.5 ಕೋಟಿಗಳನ್ನು ಪಡೆಯಲಾಗಿದೆ.
ಈಗಾಗಲೇ ಮನೆ ಹೊಂದಿದವರು, ಶ್ರೀಮಂತರು ಸರ್ಕಾರಿ ಮನೆಗಳನ್ನು ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸುತ್ತಿದ್ದಾರೆ. ಇಂತಹವರನ್ನು ಹಿಡಿಯುವ ಪ್ರಯತ್ನ ಯುಪಿ, ಮಧ್ಯಪ್ರದೇಶದಲ್ಲಿ ನಡೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.