ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಣೆಗೊಂಡಿರುವ, ದೇಶದ ಅತ್ಯಂತ ಜನಪ್ರಿಯ ಕಾರ್ಟೂನ್ ಕ್ಯಾರೆಕ್ಟರ್ ಛೋಟಾ ಭೀಮ್ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದೆ. ಛೋಟಾ ಭೀಮ್ ಸ್ವಚ್ಛತೆಯ ಭಾಗಿಯಾಗಿರುವ ಆ್ಯಪ್ ವೊಂದನ್ನು ಬಿಡುಗಡೆಗೊಳಿಸಲಾಗಿದೆ.
ಈ ಛೋಟಾ ಭೀಮ್ ಅನ್ನು ಸ್ವತಃ ದೇಶದ ಪ್ರಧಾನಿಗಳೇ ಸ್ವಾಗತಿಸಿದ್ದಾರೆ. ಟ್ವಿಟ್ ಮಾಡಿರುವ ನರೇಂದ್ರ ಮೋದಿ, ‘ಛೋಟಾ ಭೀಮ್ನಿಂದ ದೊಡ್ಡ ಬೆಂಬಲ. ಸ್ವಚ್ಛ ಭಾರತ ಅಭಿಯಾನದ ಕನಸನ್ನು ಸಾಕಾರಗೊಳಿಸಲು ಶ್ರಮಿಸುತ್ತಿರುವ ತಂಡದೊಂದಿಗೆ ಕೈಜೋಡಿಸಿದ್ದಕ್ಕೆ ಥ್ಯಾಂಕ್ಯೂ ಛೋಟಾ ಭೀಮ್’. ಈ ಮೌಲ್ಯಯುತ ಬೆಂಬಲ ಯುವಜನರು ಸ್ವಚ್ಛತಾ ಅಭಿಯಾನದ ಭಾಗವಾಗುವಂತೆ ಪ್ರೇರೇಪಿಸಲಿದೆ’ ಎಂದಿದ್ದಾರೆ.
ಬಿಡುಗಡೆಗೊಂಡ ಆ್ಯಪ್ ನಲ್ಲಿ ಛೋಟಾ ಭೀಮ್ ಕೇವಲ ಭಾರತವನ್ನು ಸ್ವಚ್ಛಗೊಳಿಸುವಲ್ಲಿ ಭಾಗಿದಾರನಾಗಿರುವುದಿಲ್ಲ, ಸ್ನೇಹಿತರಿಗೂ ಸ್ವಚ್ಛತೆ ಮಾಡುವಂತೆ ಹುರಿದುಂಬಿಸಲಿದ್ದಾನೆ.
छोटा भीम का बड़ा समर्थन!
Thank you Chhota Bheem, for strengthening the team that is fulfilling the dream of a Swachh Bharat.
This valuable support will surely motivate more youngsters to join the movement. https://t.co/vjPU50DSoJ
— Narendra Modi (@narendramodi) January 26, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.