ನವದೆಹಲಿ: ಮಾನವ ರಹಿತ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಭಾರತೀಯ ವಾಯುಸೇನೆಯು ಸುಮಾರು 15 HAROP ಅಟ್ಯಾಕ್ ಡ್ರೋನ್ಗಳನ್ನು ಖರೀದಿ ಮಾಡಲು ಯೋಜಿಸುತ್ತಿದೆ.
ಈ ಡ್ರೋನ್ ಶತ್ರುಗಳ ಹೈ ವಾಲ್ಯೂ ಮಿಲಿಟರಿ ಟಾರ್ಗೆಟ್ಗಳನ್ನು ಧ್ವಂಸ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದು ಎಲೆಕ್ಟ್ರೋ ಆಪ್ಟಿಕಲ್ ಸೆನ್ಸಾರ್ ಹೊಂದಿದೆ. ಈ ಸೆನ್ಸಾರ್ ಕಣ್ಗಾವಲಿನ ಮೂಲ, ರ್ಯಾಡರ್ ಸ್ಟೇಶನ್ ಮುಂತಾದ ಶತ್ರುಗಳ ಹೈ ವಾಲ್ಯೂ ಮಿಲಿಟರಿ ಟಾರ್ಗೆಟ್ಗಳನ್ನು ಪತ್ತೆ ಹಚ್ಚಬಲ್ಲದು. ಬಳಿಕ ದ್ರೋನ್ ನೇರವಾಗಿ ಅಲ್ಲಿಗೆ ದಾಳಿ ಮಾಡಿ ಅದನ್ನು ಧ್ವಂಸ ಮಾಡಬಲ್ಲದು.
ಮುಂದಿನ ವಾರ ನಡೆಯುವ ರಕ್ಷಣಾ ಸಚಿವಾಲಯದ ಉನ್ನತಮಟ್ಟದ ಸಭೆಯಲ್ಲಿ HAROP ಡ್ರೋನ್ ಖರೀದಿಯ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಭಾರತೀಯ ಸೇನೆಗೆ ಬಹುತೇಕ ಎಲ್ಲಾ ವಿಧಾನದ ಡ್ರೋನ್ಗಳನ್ನು ಪೂರೈಕೆ ಮಾಡುವ ಇಸ್ರೇಲ್ನೊಂದಿಗೇ HAROP ಡ್ರೋನ್ ಖರೀದಿ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.