ಮಧುರೈ: ನಿನ್ನೆ ಭಾನುವಾರ ತಮಿಳುನಾಡಿನ ಮಧುರೈಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಅಲ್ಲಿ ಮುದ್ರಾ ಯೋಜನೆಯ ಫಲಾನುಭವಿ ಉದ್ಯಮಿ ಅರುಲ್ಮೋಝಿ ಸರವಣನ್ ಅವರನ್ನು ಭೇಟಿಯಾದರು. ಪ್ರಧಾನಿ ಸಚಿವಾಲಯ ಇವರ ಥರ್ಮೊಫ್ಲಾಸ್ಕ್ಗಳನ್ನು ಸರ್ಕಾರ ಇ-ಮಾರ್ಕೆಟ್ ಮೂಲಕ ಆರ್ಡರ್ ಪ್ಲೇಸ್ ಮಾಡಿತ್ತು.
ಪ್ರಧಾನಿ ಮೋದಿಯವರು ಹಲವಾರು ಸಂದರ್ಭಗಳಲ್ಲಿ ಅರುಲ್ಮೋಝಿ ಅವರ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ಆಕೆ ಪತ್ರ ಬರೆದು ಮೋದಿಯನ್ನು ತಮ್ಮ ತಂದೆ ಸಮಾನರು ಎಂದು ಕರೆದಿದ್ದರು.
ಮುದ್ರಾ ಯೋಜನೆಯಿಂದ ಸಾಲ ಪಡೆದು ಇವರು ಸರ್ಕಾರಿ ಕಛೇರಿಗಳಿಗೆ ಸಣ್ಣ ಸರಕು ಮತ್ತು ಸಮಾಗ್ರಿಗಳನ್ನು ಪೂರೈಕೆ ಮಾಡುವ ಉದ್ಯಮ ಆರಂಭಿಸಿದರು. ಸರ್ಕಾರ ಇ-ಮಾರ್ಕೆಟ್ ಪ್ಲೇಸ್ ಬಗ್ಗೆ ತಿಳಿದುಕೊಂಡು ಅಲ್ಲಿ ನೋಂದಣಿ ಮಾಡಿಕೊಂಡಿದ್ದರು.
2017ರಲ್ಲಿ ಈ ವೆಬ್ಸೈಟ್ ಬ್ರೌಸ್ ಮಾಡಿದಾಗ, ಪ್ರಧಾನಿ ಸಚಿವಾಲಯ ಥರ್ಮೋಫ್ಲಾಸ್ಕ್ಗಳನ್ನು ಖರೀದಿ ಮಾಡಲು ಆಸಕ್ತಿ ತೋರಿಸುತ್ತಿದೆ ಎಂದು ತಿಳಿದುಕೊಂಡ ಅವರು, ತಕ್ಷಣ ನೋಟಿಫಿಕೇಶನ್ಗೆ ಸ್ಪಂದಿಸಿದರು. ತಕ್ಷಣ ಪ್ರಧಾನಿ ಕಾರ್ಯಾಲಯ ಆರ್ಡರ್ ಪ್ಲೇಸ್ ಮಾಡಿತು. ಬಳಿಕ ಡೆಲಿವರಿಯಾದ ಬಳಿಕ ಪೇಮೆಂಟ್ ಮಾಡಿತು.
ಬಳಿಕ ಆಕೆ ಉದ್ಯಮಿಯಾದ ತನ್ನ ಕಥೆಯನ್ನು ಪತ್ರ ಮುಖೇನ ಮೋದಿಯವರಿಗೆ ವಿವರಿಸಿದ್ದರು. ಮೋದಿಯವರು ಇದನ್ನು ಮನ್ ಕೀ ಬಾತ್ನಲ್ಲೂ ಹಂಚಿಕೊಂಡಿದ್ದರು. ಇದೀಗ ಅವರನ್ನು ನೇರವಾಗಿ ಭೇಟಿಯಾಗಿ ಮೋದಿ ಮಾತನಾಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.