ನವದೆಹಲಿ: ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ ಆರ್ಗನೈಝೇಶನ್(ಡಿಆರ್ಡಿಓ), ದೀರ್ಘ ವ್ಯಾಪ್ತಿಯ ಮೇಲ್ಮೈನಿಂದ ವಾಯು ಕ್ಷಿಪಣಿ (Long Range Surface to Air Missile LR-SAM)ನ ಪ್ರಾಯೋಗಿಕ ಪರೀಕ್ಷೆಯನ್ನು ಯುದ್ಧನೌಕೆ ಐಎನ್ಎಸ್ ಚೆನ್ನೈ ಮೂಲಕ ಯಶಸ್ವಿಯಾಗಿ ಮಾಡಿದೆ.
ಒರಿಸ್ಸಾ ಕರಾವಳಿಯಲ್ಲಿ ಪರೀಕ್ಷೆಯನ್ನು ನಡೆಸಲಾಗಿದ್ದು, ದೀರ್ಘ ವ್ಯಾಪ್ತಿಯ ಮೇಲ್ಮೈನಿಂದ ವಾಯುಕ್ಷಿಪಣಿಯು ಕಡಿಮೆ ಹಾರಾಟದ ವೈಮಾನಿಕ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಈ ಯಶಸ್ಸನ್ನು ‘ಮಹತ್ವದ ಮೈಲಿಗಲ್ಲು’ ಎಂದು ರಕ್ಷಣಾ ಸಚಿವಾಲಯ ಟ್ವಿಟರ್ನಲ್ಲಿ ಹೇಳಿದೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟ್ವಿಟ್ ಮಾಡಿ, ಡಿಆರ್ಡಿಓ ಮತ್ತು ಭಾರತೀಯ ನೌಕಾಸೇನೆಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ‘ಐಎನ್ಎಸ್ ಚೆನ್ನೈ ಮೂಲಕ ದೀರ್ಘ ವ್ಯಾಪ್ತಿಯ ಮೇಲ್ಮೈನಿಂದ ವಾಯು ಕ್ಷಿಪಣಿಯ ಯಶಸ್ವಿ ಪರೀಕ್ಷೆಯ ಮೂಲಕ ಭಾರತ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಈ ಕ್ಷಿಪಣಿ ಕಡಿಮೆ ಹಾರಾಟದ ವೈಮಾನಿಕ ಗುರಿಯನ್ನು ನೇರವಾಗಿ ತಲುಪಿದೆ. ಡಿಆರ್ಡಿಓ, ನೌಕಾಸೇನೆ, ಇತರ ಪಾಲುದಾರರಿಗೆ ಅಭಿನಂದನೆಗಳು’ ಎಂದಿದ್ದಾರೆ.
India achieves a significant milestone with successful flight test of LRSAM on board INS Chennai. The missile direcly hit a low flying aerial target.
Smt @nsitharaman congratulates @DRDO_India, @indiannavy , the industry and other stakeholders for this landmark achievement.
— Raksha Mantri (@DefenceMinIndia) January 24, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.