ನವದೆಹಲಿ: ಭಾರತದ ಮಿಲಿಟರಿ ಸೆಟ್ಲೈಟ್ ಮೈಕ್ರೋಸ್ಯಾಟ್-ಆರ್ ಮತ್ತು ವಿದ್ಯಾರ್ಥಿ ನಿರ್ಮಿತ ಕಲಾಂಸ್ಯಾಟನ್ನು ಪಿಎಸ್ಎಲ್ವಿ ಸಿ44 ಮೂಲಕ ಯಶಸ್ವಿಯಾಗಿ ಉಡಾವಣೆಗೊಳಿಸಿದ ಇಸ್ರೋಗೆ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, ‘ಮತ್ತೊಂದು ಯಶಸ್ವಿ ಪಿಎಸ್ಎಲ್ ಉಡಾವಣೆಗಾಗಿ ಇಸ್ರೋಗೆ ಅಭಿನಂದನೆಗಳು. ಈ ಉಡಾವಣೆ ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳು ನಿರ್ಮಿಸಿದ ಕಲಾಂಸ್ಯಾಟ್ನ್ನು ಕಕ್ಷೆಗೆ ಸೇರಿಸಿದೆ. ಸೂಕ್ಷ್ಮ ಗುರುತ್ವ ಪ್ರಯೋಗಗಳಿಗಾಗಿ ಸ್ಪೇಸ್ ರಾಕೆಟ್ನ ನಾಲ್ಕನೇ ಹಂತವನ್ನು ಕಕ್ಷೆಯ ವೇದಿಕೆಯಾಗಿ ಬಳಸಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ’ ಎಂದಿದ್ದಾರೆ.
ಕಲಾಂಸ್ಯಾಟ್ ವಿಶ್ವದ ಅತ್ಯಂತ ಲಘು ಸೆಟ್ಲೈಟ್ ಆಗಿದೆ.
ಇದು 2019ರ ಇಸ್ರೋದ ಮೊದಲ ಮಿಶನ್ ಆಗಿದ್ದು, ರಾತ್ರಿ 11.37ರ ಸುಮಾರಿಗೆ ವಾಹಕ ಲಾಂಚ್ಪ್ಯಾಡ್ನಿಂದ ನಭಕ್ಕೆ ಚಿಮ್ಮಿದೆ.
Heartiest congratulations to our space scientists for yet another successful launch of PSLV.
This launch has put in orbit Kalamsat, built by India’s talented students.
— Narendra Modi (@narendramodi) January 25, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.