ಅಮೇಥಿ: ರಾಹುಲ್ ಗಾಂಧಿಯವರ ಲೋಕಸಭಾ ಕ್ಷೇತ್ರ ಅಮೇಥಿಯ ಜನರು ಬುಧವಾರ ತಮ್ಮ ಸಂಸದನ ವಿರುದ್ಧವೇ ಘೋಷಣೆ ಕೂಗಿದ್ದಾರೆ. ಒಂದಾ ನಮಗೆ ಉದ್ಯೋಗವನ್ನು ನೀಡಬೇಕು, ಇಲ್ಲದಿದ್ದರೆ ರಾಜೀವ್ ಗಾಂಧಿ ಫೌಂಡೇಶನ್ಗೆ ನೀಡಿದ ಭೂಮಿಯನ್ನು ವಾಪಾಸ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅಮೇಥಿಯಲ್ಲಿ ಚುನಾವಣಾ ಪ್ರಚಾರಕ್ಕೆಂದು ರಾಹುಲ್ ಅವರು ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ‘ಇಟಲಿಗೆ ವಾಪಾಸ್ ಹೋಗಿ’ ಎಂದು ರೈತರು ಘೋಷಣೆ ಕೂಗಿದ್ದಾರೆ.
ಅಮೇಥಿ ಜಿಲ್ಲೆಯ ಗೌರಿಗಂಝ್ ನಗರದ ಒರ್ವ ಪ್ರತಿಭಟನಾಗಾರ, ’ನಾವು ರಾಹುಲ್ ಗಾಂಧಿ ಬಗ್ಗೆ ಬೇಸರಗೊಂಡಿದ್ದೇವೆ. ಅವರು ಇಟಲಿಗೆ ವಾಪಾಸ್ ಹೋಗಬೇಕು, ಅವರಿಗೆ ಇಲ್ಲಿರಲು ಅರ್ಹತೆ ಇಲ್ಲ, ರಾಹುಲ್ ನಮ್ಮ ಭೂಮಿಯನ್ನು ಕಬಳಿಸಿದ್ದಾರೆ’ ಎಂದಿದ್ದಾರೆ.
ರಾಜೀವ್ ಗಾಂಧಿಯವರು ಅಮೇಥಿ ಲೋಕಸಭಾ ಸಂಸದರಾಗಿದ್ದ ವೇಳೆ ಉದ್ಘಾಟನೆಗೊಳಿಸಿದ್ದ ಸಾಮ್ರಾಟ್ ಸೈಕ್ ಫ್ಯಾಕ್ಟರಿಯ ಮುಂದೆ ಪ್ರತಿಭಟನೆಯನ್ನು ನಡೆಸಲಾಗಿದೆ.
ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ಗೆಂದು ಪಡೆದ ಭೂಮಿಗೆ ಪ್ರತಿಯಾಗಿ ಗಾಂಧಿ ಕುಟುಂಬ ರೈತರಿಗೆ ಏನನ್ನೂ ನೀಡಿಲ್ಲ ಎಂದು ಹೇಳಲಾಗಿದೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿಯವರೂ ಗಾಂಧಿ ಕುಟುಂಬ ಅಮೇಥಿಯಲ್ಲಿ ಭೂ ಕಬಳಿಕೆ ಮಾಡಿದೆ ಎಂದು ಈ ಹಿಂದೆ ಆರೋಪಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.