ನವದೆಹಲಿ: ಜನವರಿ 30ರ ಗಾಂಧೀಜಿ 71ನೇ ಪುಣ್ಯತಿಥಿಯಂದು ಗುಜರಾತಿನ ಕರಾವಳಿ ಗ್ರಾಮ ದಂಡೀಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಸೋಲಾರ್ ಆಧಾರಿತ ದಂಡೀ ಸತ್ಯಾಗ್ರಹ ಸ್ಮಾರಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಭಾರತೀಯರು ಉಪ್ಪು ತಯಾರಿಸದಂತೆ ಬ್ರಿಟಿಷರು ವಿಧಿಸಿದ್ದ ನಿಷೇಧದ ವಿರುದ್ಧ ಮಹಾತ್ಮ ಗಾಂಧೀಜಿಯವರು ತಮ್ಮ ಅಪಾರ ಬೆಂಬಲಿಗರೊಂದಿಗೆ, 1930ರ ಎಪ್ರಿಲ್ 1ರಂದು ಅಹ್ಮದಾಬಾದ್ನಿಂದ ಸೂರತ್ ಸಮೀಪದ ದಂಡೀಗೆ 380ಕಿ.ಮೀ ಕಾಲ್ನಡಿಗೆ ಆರಂಭಿಸಿದರು, ಎಪ್ರಿಲ್ 6ರಂದು ದಂಡೀಯನ್ನು ತಲುಪಿ ಅಲ್ಲಿ ಉಪ್ಪು ತಯಾರಿಸಲಾರಂಭಿಸಿದರು. ಇದಕ್ಕೆ ಉಪ್ಪಿನ ಸತ್ಯಾಗ್ರಹ ಎಂದೂ ಕರೆಯುತ್ತಾರೆ.
ಇದರ ಸ್ಮರಣಾರ್ಥ ದಂಡಿಯಲ್ಲಿ ಸೋಲಾರ್ ಚಾಲಿತ ರಾಷ್ಟ್ರೀಯ ಉಪ್ಪಿನ ಸತ್ಯಾಗ್ರಹ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ಮೋದಿ ಇದನ್ನು ಜ.30ರಂದು ಲೋಕಾರ್ಪಣೆಗೊಳಿಸುತ್ತಿದ್ದಾರೆ. ಲೇಸರ್ ಮೂಲಕ ಉಪ್ಪು ತಯಾರಿಸುವ ಅನುಭವವನ್ನು ಇಲ್ಲಿ ನೀಡಲಾಗುತ್ತದೆ ಎನ್ನಲಾಗಿದೆ.
70 ಕೋಟಿ ರೂಪಾಯಿ ವೆಚ್ಚದಲ್ಲಿ ಇದರ ನಿರ್ಮಾಣವಾಗಿದ್ದು, ಐಐಟಿ ಬಾಂಬೆ ಇದನ್ನು ವಿನ್ಯಾಸಪಡಿಸಿದೆ. 15 ಎಕರೆ ಪ್ರದೇಶದಲ್ಲಿ ಮ್ಯೂಸಿಯಂ ಇದ್ದು, 41 ಸೋಲಾರ್ ಪ್ಯಾನಲ್ಗಳನ್ನು ಇಲ್ಲಿ ಅಳವಡಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.