ನವದೆಹಲಿ: ಸ್ವಾತಂತ್ರ್ಯ ಸಿಕ್ಕು 70 ವರ್ಷಗಳ ತರುವಾಯ, ನೇತಾಜೀ ಸುಭಾಷ್ ಚಂದ್ರ ಬೋಸ್ ರಚನೆ ಮಾಡಿದ್ದ ಇಂಡಿಯನ್ ನ್ಯಾಷನಲ್ ಆರ್ಮಿ(ಐಎನ್ಎ)ಯ ನಾಲ್ವರು ಯೋಧರು ಈ ಬಾರಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗಿಯಾಗುತ್ತಿದ್ದಾರೆ.
ಮೊತ್ತ ಮೊದಲ ಬಾರಿಗೆ ಇಂಡಿಯನ್ ನ್ಯಾಷನಲ್ ಆರ್ಮಿಯ ಯೋಧರು ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಪರೇಡ್ನ ಉಪ ಕಮಾಂಡರ್ ಮೇಜರ್ ಜನರಲ್ ರಾಜ್ಪಾಲ್ ಪೂನಿಯಾ ತಿಳಿಸಿದ್ದಾರೆ.
ಈ ನಾಲ್ವರು ಯೋಧರ ವಯಸ್ಸು 97ರಿಂದ 100 ವರ್ಷ. ಈ ನಾಲ್ವರ ಪೈಕಿ ಅತ್ಯಂತ ಹಿರಿಯರು ಬಗ್ಮಲ್, ಇವರ ವಯಸ್ಸು 100 ವರ್ಷ. ಹರಿಯಾಣದ ಮನಸೇರ್ ಮೂಲದವರು. 1942ರಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿದ್ದು ಹೋರಾಡಿದ್ದರು.
ಉಳಿದಂತೆ 98 ವರ್ಷದ ಪಂಚಕುಲ ನಿವಾಸಿ ಲಲ್ತಿ ರಾಮ್, ಹರಿಯಾಣದ 97 ವರ್ಷದ ನರ್ನೌಲ್, ಚಂಡೀಗಢದ 97 ವರ್ಷದ ಪರಮಾನಂದ್ ಯಾದವ್ ಪರೇಡ್ನಲ್ಲಿ ಭಾಗಿಯಾಗುತ್ತಿದ್ದಾರೆ.
1942ರಲ್ಲಿ ರಚನೆಯಾದ ಐಎನ್ಎ, ಸ್ವಾತಂತ್ರ್ಯ ಸಿಗುವವರೆಗೂ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿತ್ತು. ಈ ಆರ್ಮಿಯಲ್ಲಿ ಭಾಗವಹಿಸಿದ್ದವರಿಗೆ ಹಿಂದೆಂದೂ ಸಿಗದ ಗೌರವ ನರೇಂದ್ರ ಮೋದಿಯವರ ಆಡಳಿತದಲ್ಲಿ ಸಿಗುತ್ತಿದೆ ಎನ್ನುವುದು ಗಮನಾರ್ಹ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.