ಮಥುರಾ: ಇನ್ನು 15 ತಿಂಗಳೊಳಗೆ ಮಥುರಾ ನಿವಾಸಿಗಳು ಯಮುನಾ ನದಿಯ ಶುದ್ಧ ನೀರನ್ನು ಪಡೆಯಲಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ
ಮಥುರಾದಲ್ಲಿ ನಮಮಿ ಗಂಗಾ ಯೋಜನೆಗಳಿಗೆ ಅಡಿಪಾಯ ಹಾಕಿ ಮಾತನಾಡಿದ ಅವರು, ಮಥುರಾ ನಿವಾಸಿಗಳಿಗೆ 15 ತಿಂಗಳೊಳಗೆ ಯಮುನಾ ನದಿಯ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡುತ್ತೇನೆ ಎಂಬ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಮಥುರಾದಲ್ಲಿ ರೂ.511.74 ಕೋಟಿ ವೆಚ್ಚದ ನಾಲ್ಕು ಯೋಜನೆಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಈ ಯೋಜನೆಗಳ ಪೈಕಿ ಎರಡು ಒಳಚರಂಡಿ ಯೋಜನೆಗಳಾಗಿವೆ. ಮೊದಲನೇಯದು ಹೈಬ್ರಿಡ್ ಆನ್ಯೂಟಿ ಮೋಡ್ನೊಂದಿಗೆ “ಒನ್-ಸಿಟಿ-ಒನ್-ಆಪರೇಟರ್” ವಿಧಾನದೊಂದಿಗೆ ನಗರಕ್ಕಾಗಿನ ಸಂಯೋಜಿತ ಒಳಚರಂಡಿ ಮೂಲಸೌಕರ್ಯವಾಗಿದೆ ಮತ್ತು ಮಥುರಾ ಸಂಸ್ಕರಣಾಗಾರದಲ್ಲಿ ಸಂಸ್ಕರಿಸಿದ ಒಳಚರಂಡಿ ನೀರಿನ ಮರುಬಳಕೆಯ ರೂ.460.45 ಕೋಟಿ ರೂಪಾಯಿ ಯೋಜನೆ.
ಎರಡನೇಯದು, ಒಳಚರಂಡಿ ಮೂಲಸೌಕರ್ಯದ ಪುನರ್ವಸತಿ ಮತ್ತು ವೃಂದಾವನದಲ್ಲಿ ಎಸ್ಟಿಪಿಯ ವರ್ಧನೆ ಉನ್ನತೀಕರಿಸುವಿಕೆಯ ರೂ.33.82 ಕೋಟಿಗಳ ಯೋಜನೆ.
ದೆಹಲಿಯಿಂದ ಪ್ರಯಾಗ್ರಾಜ್ಗೆ ಫೆಬ್ರವರಿ 15ರೊಳಗೆ ಏರ್ಬೋಟ್ ಸರ್ವಿಸ್ ಆರಂಭಿಸುವುದಾಗಿ ಗಡ್ಕರಿ ಹೇಳಿದ್ದಾರೆ.