ನವದೆಹಲಿ: ಇದೇ ಮೊದಲ ಬಾರಿಗೆ ಭಾರತೀಯ ಸೇನೆಯ ಅಧಿಕಾರಿಯೊಬ್ಬರು ಕೇವಲ 10 ದಿನಗಳಲ್ಲಿ ಕನಿಷ್ಠ 6 ಸಾವಿರ ಮೀಟರ್ ಎತ್ತರಗಳ ಆರು ಪರ್ವತ ಶಿಖರಗಳನ್ನು ಹತ್ತಿ ಮಹತ್ವದ ಸಾಧನೆಯನ್ನು ಮಾಡಿದ್ದಾರೆ.
ಕೊಲೊನಿಯಲ್ ರಣವೀರ್ ಸಿಂಗ್ ಜಮ್ವಾಲ್ ಅವರು ಈ ಸಾಧನೆಯನ್ನು ಮಾಡಿದ ಸೇನಾಧಿಕಾರಿಯಾಗಿದ್ದಾರೆ. ಇವರು – 6,050 ಮೀಟರ್ಗಳ ಕೊಪಿಯೊಪೋ, 6,016 ಮೀಟರ್ಗಳ ಸ್ಯಾನ್ ಫ್ರಾನ್ಸಿಸ್ಕೋ, 6,627 ಮೀಟರ್ಗಳ ಇನ್ಕಾಹುಸಿ, 6,187 ಮೀಟರ್ಗಳ ಎರ್ಮೇಟಿಯೋಯೋ, 6,893 ಮೀಟರ್ಗಳ ಓಜೋಸ್ ಡೆಲ್ ಸಲಾಡೊ, ಮತ್ತು 6,742 ಮೀಟರಿನ ದಕ್ಷಿಣದ ಟ್ರೆಸ್ ಕ್ರೂಸ್ನ್ನು ಹತ್ತು ದಿನಗಳಲ್ಲಿ ಹತ್ತಿದ್ದಾರೆ.
ಓಜೋಸ್ ಡೆಲ್ ಸಲಾಡೊ ಜಗತ್ತಿನ ಅತೀ ಎತ್ತರದ ಜ್ವಾಲಾಮುಖಿ ಪರ್ವತವಾಗಿದೆ.
ಭಾರತೀಯ ಸೇನೆಯು ಟ್ವಿಟರ್ನಲ್ಲಿ ಜಮ್ವಾಲ್ ಅವರ ಸಾಧನೆಯನ್ನು ಹಂಚಿಕೊಂಡು ಅಭಿನಂದನೆಗಳನ್ನು ತಿಳಿಸಿದೆ.
ಈಗಾಗಲೇ ಜಮ್ವಾಲ್ ಅವರು ಮೌಂಟ್ ಎವರೆಸ್ಟ್, ಮೌಂಟ್ ಕಿಲಿಮಂಜಾರೋ, ಮೌಂಟ್ ಎಲ್ಬರ್ಸ್ ಇತ್ಯಾದಿ ಪರ್ವತಗಳನ್ನು ಹತ್ತಿದ್ದಾರೆ.
Colonel Ranveer Singh Jamwal is the first Army man to summit six mountains of 6000 mtr (20,000 ft) & above in 10 days, which includes the highest volcanic mountain in the world (Ojos del salado-6893 mtr). #IndianArmy #SagaOfChampions #Proud @SpokespersonMoD @PIB_India pic.twitter.com/OQ2ReJymGC
— ADG PI – INDIAN ARMY (@adgpi) January 23, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.