ಅಂಡಮಾನ್: ಹಿಂದೂ ಮಹಾಸಾಗರದಲ್ಲಿ ಚೀನಾ ಚಟುವಟಿಕೆಗಳು ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ, ಭಾರತೀಯ ನೌಕಾಸೇನೆಯು ಅಂಡಮಾನ್ನಲ್ಲಿ ಐಎನ್ಎಸ್ ಕೊಹಾಸ್ಸಾ ವಾಯುನೆಲೆಯನ್ನು ಕಾರ್ಯಾರಂಭಿಸಿದೆ.
ನೌಕಾ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ಅವರು ಐಎನ್ಎಸ್ ಕೊಹಾಸ್ಸಾ ವಾಯುನೆಲೆಯನ್ನು ಉದ್ಘಾಟನೆಗೊಳಿಸಿದರು. ಇದು ಪೋರ್ಟ್ಬ್ಲೇರ್ನಿಂದ 300 ಕಿಮೀ ದೂರದಲ್ಲಿದೆ.
ಅಂಡಮಾನ್-ನಿಕೋಬಾರ್ ಪ್ರದೇಶದಲ್ಲಿ ನೌಕೆಯ ಮೂರನೇ ವಾಯುನೆಲೆ ಇದಾಗಿದೆ. ಈ ವಾಯುನೆಲೆಯ ಮೂಲಕ ಹಿಂದೂ ಮಹಾಸಾಗರವನ್ನು ಪ್ರವೇಶಿಸುವ ಚೀನಾ ಹಡಗು ಮತ್ತು ಜಲಾಂತರ್ಗಾಮಿಗಳ ಮೇಲೆ ಹದ್ದಿನ ಕಣ್ಗಾವಲನ್ನು ಇಡಲಾಗುತ್ತದೆ.
ತನ್ನ ನೆರೆಹೊರೆಯಲ್ಲಿ ಚೀನಾವು ದೊಡ್ಡ ದೊಡ್ಡ ನೌಕೆಗಳನ್ನು ನಿಯೋಜಿಸುತ್ತಿರುವ ಬಗ್ಗೆ ಭಾರತಕ್ಕೆ ಕಳವಳ ಇದೆ. ಮಾತ್ರವಲ್ಲ, ಶ್ರೀಲಂಕಾದಿಂದ ಪಾಕಿಸ್ತಾನಕ್ಕೆ ಕವಚವನ್ನು ವಿಸ್ತರಿಸುತ್ತಿರುವ ವಾಣಿಜ್ಯ ಬಂದರುಗಳ ಜಾಲ ಬೆಳೆಯುತ್ತಿದ್ದು, ಇದು ನೆೇವೆಲ್ ಔಟ್ಪೋಸ್ಟ್ಗಳಾಗಿ ಪರಿವರ್ತನೆಗೊಳ್ಳಬಹುದು ಎಂಬ ಆತಂಕ ಭಾರತಕ್ಕಿದೆ.
ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ, ಭಾರತೀಯ ಸೇನೆಯು ಚೀನಾದ ಸವಾಲುಗಳನ್ನು ಎದುರಿಸುವ ಸಲುವಾಗಿ ಮಲಕ್ಕ ಸ್ಟ್ರೈಟ್ ಪ್ರವೇಶ ದ್ವಾರವಾಗಿರುವ ಅಂಡಮಾನ್ನಲ್ಲಿ ದೊಡ್ಡ ದೊಡ್ಡ ಹಡಗು, ಏರ್ಕ್ರಾಫ್ಟ್ಗಳನ್ನು ನಿಯೋಜನೆಗೊಳಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.