ನವದೆಹಲಿ: 2017-18ನೇ ಸಾಲಿನ ಹಣಕಾಸು ವರ್ಷದಲ್ಲಿ ಬಿಹಾರ ಅತ್ಯಂತ ವೇಗದಲ್ಲಿ ಪ್ರಗತಿ ಕಾಣುತ್ತಿರುವ ನಂ.1 ರಾಜ್ಯವಾಗಿ ಹೊರಹೊಮ್ಮಿದೆ, ಎರಡನೇ ಸ್ಥಾನದಲ್ಲಿ ಆಂಧ್ರಪ್ರದೇಶ ಇದ್ದು, 3ನೇ ಸ್ಥಾನದಲ್ಲಿ ಗುಜರಾತ್ ಇದೆ.
CRISILನ ‘ಸ್ಟೇಟ್ಸ್ ಆಫ್ ಗ್ರೋತ್ 2.0’ ವರದಿಯಲ್ಲಿ ಈ ರ್ಯಾಂಕಿಂಗ್ ನೀಡಲಾಗಿದೆ. ಬಿಹಾರದ ಜಿಎಸ್ಡಿಪಿ (ಗ್ರಾಸ್ ಸ್ಟೇಟ್ ಡೊಮ್ಯಾಸ್ಟಿಕ್ ಪ್ರೊಡಕ್ಟ್) ಪ್ರಗತಿ ಶೇ.11.3ರಷ್ಟು ದಾಖಲಾಗಿದೆ. ಇದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ. ಯಾಕೆಂದರೆ 2017ರಲ್ಲಿ ಇಲ್ಲಿನ ಜಿಎಸ್ಡಿಪಿ ಪ್ರಗತಿ ಶೇ.9.9ರಷ್ಟು ಇತ್ತು.
ಆರ್ಬಿಐನ ನಾನ್-ಸ್ಪೆಷಲ್ ಕೆಟಗರಿಯಲ್ಲಿರುವ 17 ರಾಜ್ಯಗಳ ಪೈಕಿ 12 ರಾಜ್ಯಗಳು 2018ರ ಭಾರತದ ಆರ್ಥಿಕ ಪ್ರಗತಿ ದರ ಶೇ.6.7ರಷ್ಟಕ್ಕಿಂತ ವೇಗದಲ್ಲಿ ಪ್ರಗತಿ ಹೊಂದಿವೆ ಎಂದು ವರದಿ ತಿಳಿಸಿದೆ.
ಉತ್ರರಪ್ರದೇಶ, ಕರ್ನಾಟಕ ಮತ್ತು ಬಿಹಾರ ಒಟ್ಟಾರೆ ವ್ಯಯದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿವೆ.
ಪಂಜಾಬ್, ರಾಜಸ್ಥಾನ ಮತ್ತು ಕೇರಳದಲ್ಲಿ ಸಾಲದ ಅನುಪಾತವು 30% ಕ್ಕಿಂತ ಹೆಚ್ಚಿತ್ತು, ಆದರೆ ಇದು ಛತ್ತೀಸ್ಗಢ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಡಿಮೆಯಾಗಿದೆ ಎಂದು CRISIL ವರದಿ ತೋರಿಸಿದೆ.
CRISILನ ಹಿಂದಿನ ವರದಿಯನ್ನು ಜನವರಿಯ 2018 ರಲ್ಲಿ ಪ್ರಕಟಿಸಲಾಗಿದೆ ಮತ್ತು ಅದು 2013 ಮತ್ತು 2017 ರ ನಡುವಿನ ಅವಧಿಯಲ್ಲಿ ಒಟ್ಟು ದೇಶೀಯ ಉತ್ಪಾದನೆ (ಜಿಡಿಪಿ) ಬೆಳವಣಿಗೆ, ಹಣದುಬ್ಬರ ಮತ್ತು ಹಣಕಾಸಿನ ಆರೋಗ್ಯದ ಮೇಲೆ ಕೇಂದ್ರೀಕರಿಸಿತ್ತು, ಆದರೆ ಈ ಬಾರಿಯ ‘ಸ್ಟೇಟ್ಸ್ ಆಫ್ ಗ್ರೋತ್ 2.0’ ವರದಿ ರಾಜ್ಯಗಳು ಹೇಗೆ ಬೃಹತ್ ಆರ್ಥಿಕ ಕಾರ್ಯಕ್ಷಮತೆಗೆ ಕೇಂದ್ರಿಕೃತವಾಗಿದೆ, 2018 ರಲ್ಲಿ ಖರ್ಚು ಹೇಗೆ ವಿಕಸನಗೊಂಡಿತು. ಖರ್ಚು ಮಾದರಿಗಳು, ಖರ್ಚು ಗುಣಮಟ್ಟ ಮತ್ತು ವಿವಿಧ ರಾಜ್ಯಗಳ ಹಣಕಾಸಿನ ಸಮರ್ಥನೀಯತೆಯ ಬಗ್ಗೆ ಆಳವಾದ ಒಳನೋಟಗಳನ್ನು ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.