ನವದೆಹಲಿ: ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬಸ್ಥರು ಪ್ರಧಾನಿ ನರೇಂದ್ರ ಮೋದಿಯವರಿಗೆ ನೇತಾಜಿ ತೊಟ್ಟಿದ್ದ ಟೋಪಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಉಡುಗೊರೆಯನ್ನು ತಕ್ಷಣವೇ ಮೋದಿ ಕೆಂಪುಕೋಟೆ ಆವರಣದ ಕ್ರಾಂತಿ ಮಂದಿರ ಡಿಸ್ಪ್ಲೇ ಗ್ಯಾಲರಿಯಲ್ಲಿ ಇಟ್ಟರು.
ಬುಧವಾರ ನೇತಾಜೀ ಅವರ 122ನೇ ಜಯಂತಿಯನ್ನು ಆಚರಿಸಲಾಗಿದ್ದು, ಈ ವೇಳೆ ಅವರ ಕುಟುಂಬಸ್ಥರು ಮೋದಿಗೆ ಟೋಪಿ ಉಡುಗೊರೆ ನೀಡಿದ್ದರು.
ಈ ಬಗ್ಗೆ ಟ್ವಿಟರ್ನಲ್ಲಿ ಸಂತೋಷ ವ್ಯಕ್ತಪಡಿಸಿರುವ ಮೋದಿ ‘ನೇತಾಜೀ ತೊಟ್ಟಿದ್ದ ಕ್ಯಾಪನ್ನು ನನಗೆ ಉಡುಗೊರೆಯಾಗಿ ನೀಡಿದ ಬೋಸ್ ಫ್ಯಾಮಿಲಿಗೆ ನನ್ನ ಧನ್ಯವಾದಗಳು. ಕೆಂಪುಕೋಟೆ ಆವರಣದ ಕ್ರಾಂತಿ ಮಂದಿರದ ಡಿಸ್ಪ್ಲೇ ಗ್ಯಾಲರಿಯಲ್ಲಿ ಟೋಪಿಯನ್ನು ಇಡಲಾಗಿದೆ. ಹೆಚ್ಚಿನ ಸಂಖ್ಯೆಯ ಯುವಕರು ‘ಕ್ರಾಂತಿ ಮಂದಿರ’ಕ್ಕೆ ಬಂದು, ನೇತಾಜೀ ಬೋಸ್ ಜೀವನದಿಂದ ಪ್ರೇರಿತಗೊಳ್ಳುತ್ತಾರೆ ಎಂದು ನಂಬಿದ್ದೇನೆ’ ಎಂದಿದ್ದಾರೆ.
ಕೆಂಪುಕೋಟೆ ಆವರಣದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಮ್ಯೂಸಿಯಂಗಳ ಆವರಣಕ್ಕೆ ಕ್ರಾಂತಿ ಮಂದಿರ್ ಎಂದು ಕರೆಯಲಾಗುತ್ತದೆ. ಇಲ್ಲಿ ನೇತಾಜೀ ಸುಭಾಷ್ ಚಂದ್ರ ಬೋಸ್ ಮ್ಯೂಸಿಯಂನ್ನೂ ನಿನ್ನೆ ಮೋದಿ ಉದ್ಘಾಟಿಸಿದ್ದಾರೆ. ಇಲ್ಲಿ ನೇತಾಜೀ ಬಳಸುತ್ತಿದ್ದ ಮರದ ಕುರ್ಚಿ, ಪದಕ, ಸಮವಸ್ತ್ರ ಇತ್ಯಾದಿಗಳನ್ನು ಇಡಲಾಗಿದೆ.
I am grateful to the Bose family for presenting me a cap worn by Netaji Bose himself.
The cap has been immediately added to the display gallery at Kranti Mandir in the Red Fort complex.
I hope more youngsters come to Kranti Mandir and get inspired by the life of Netaji Bose. pic.twitter.com/ujl6IBmFX5
— Narendra Modi (@narendramodi) January 23, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.