ಮುಂಬಯಿ: ನಿಷೇಧಿತ ಉಗ್ರ ಸಂಘಟನೆ ಇಸಿಸ್ ಜೊತೆ ಸಂಪರ್ಕ ಹೊಂದಿದ್ದ 9 ಮಂದಿಯನ್ನು ಬುಧವಾರ ಮಹಾರಾಷ್ಟ್ರದ ಥಾಣೆ ಮತ್ತು ಔರಂಗಬಾದ್ನಲ್ಲಿ ಬಂಧನಕ್ಕೊಳಪಡಿಸಲಾಗಿದೆ. ಬಂಧಿತರ ಪೈಕಿ ಒಬ್ಬ ಅಪ್ರಾಪ್ತ ಎನ್ನಲಾಗಿದೆ.
ಪೊಲೀಸರ ಪ್ರಕಾರ, 9 ಮಂದಿಯೂ ಇಸಿಸ್ ಜೊತೆ ಸಂಪರ್ಕವನ್ನು ಹೊಂದಿದ್ದು, ಕಳೆದ ಎರಡು ದಿನಗಳಲ್ಲಿ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ತಂಡ ಅವರನ್ನು ಬಂಧನಕ್ಕೊಳಪಡಿಸಿದೆ.
ಬಂಧನಕ್ಕೂ ಮುನ್ನ ಈ 9 ಮಂದಿಯ ಮೇಲೂ ಹಲವಾರು ವಾರಗಳಿಂದ ಹದ್ದಿನ ಕಣ್ಣಿಟ್ಟು ಅವರ ಚಲನವಲನಗಳನ್ನು ಪರೀಕ್ಷಿಸಲಾಗಿತ್ತು ಎನ್ನಲಾಗಿದೆ.
ಇವರ ಬಳಿಯಿದ್ದ ಕೆಲವೊಂದು ರಾಸಾಯನಿಕ, ಪೌಡರ್, ಮೊಬೈಲ್ ಫೋನ್, ಹಾರ್ಡ್ ಡ್ರೈವ್ ಸಿಮ್ ಕಾರ್ಡ್, ಆಸಿಡ್ ಬಾಟಲ್, ಚಾಕುಗಳನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.