ಚೆನ್ನೈ: ಜನರ ಗುಂಪಿನ ವರ್ತನೆಯನ್ನು ಊಹಿಸಬಲ್ಲ ತಂತ್ರಜ್ಞಾನವನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)-ಮದ್ರಾಸ್ ಅಭಿವೃದ್ಧಿಪಡಿಸಿದ್ದು, ಅದನ್ನು ಭಾರತೀಯ ಸೇನೆಗೆ ನೀಡಲು ಮುಂದಾಗಿದೆ. ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ನಿಯಂತ್ರಣಕ್ಕೆ ಈ ತಂತ್ರಜ್ಞಾನ ಪ್ರಯೋಜನಕಾರಿಯಾಗಬಲ್ಲದು ಎನ್ನಲಾಗಿದೆ.
ಕಾರ್ಯ ಗುರುತಿಸುವಿಕೆ ಕ್ರಮಾವಳಿ, ಜನ ಸಾಂದ್ರತೆ ನಕ್ಷೆ, ಸಿಸಿಟಿವಿ ಕ್ಯಾಮೆರಾಗಳಿಮದ ಬರುವ ನೇರ ದೃಶ್ಯಗಳ ಆಧಾರದಲ್ಲಿ ಜನರ ಅಸಹಜ ವರ್ತನೆಯನ್ನು ಪತ್ತೆಹಚ್ಚುವ ತಂತ್ರಜ್ಞಾನ ಇದಾಗಿದೆ.
ಕಾಶ್ಮೀರದಲ್ಲಿ ಶುಕ್ರವಾರದ ಪ್ರಾರ್ಥನೆಗೆಂದು ಸೇರುವ ಜನ ಬಳಿಕ ಸೇನಾ ಪಡೆಗಳತ್ತ ಕಲ್ಲುತೂರಾಟ ನಡೆಸಲು ಆರಂಭಿಸುತ್ತಾರೆ. ಇವರನ್ನು ತಡೆಯುವುದೇ ಯೋಧರಿಗೆ ಹರಸಾಹಸವಾಗುತ್ತದೆ. ಈ ಹಿನ್ನಲೆಯಲ್ಲಿ ಈ ತಂತ್ರಜ್ಞಾನವನ್ನು ಬಳಸಿ ಜನರ ಗುಂಪಿನ ಭಾವನೆಯನ್ನು ಮೊದಲೇ ಅರ್ಥಮಾಡಿಕೊಂಡು ಕ್ರಮ ಜರುಗಿಸಲು ಸಾಧ್ಯವಾಗಬಹುದು.
ನಮ್ಮ ತಂತ್ರಜ್ಞಾನ ಭಾರತೀಯ ಸೇನೆಗೆ ಸಾಕಷ್ಟು ಪ್ರಯೋಜನಕಾರಿಯಾಗಲಿದೆ ಎಂದು ಐಐಟಿ ಮದ್ರಾಸ್ನ ವಿದ್ಯಾರ್ಥಿ ನಾಯಕರುಗಳು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.