ವಾರಣಾಸಿ: ಭಾರತ ಅನನ್ಯವಾದರೆ, ಭಾರತೀಯತೆ ಸಾರ್ವತ್ರಿಕ ಎಂದು ಮಾರಿಷಿಯಸ್ ಪ್ರಧಾನಿ ಪ್ರವಿಂದ್ ಜಗನೌಥ್ ಹೇಳಿದ್ದಾರೆ.
ಮಂಗಳವಾರ 15ನೇ ಪ್ರವಾಸಿ ಭಾರತೀಯ ದಿವಸ್ನ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಅನಾದಿ ಕಾಲದ ಅಭ್ಯಾಸವಾದ ಯೋಗವನ್ನು ಇಂದಿನ ಆಧುನಿಕ ಯುಗದ ಅಭ್ಯಾಸವನ್ನಾಗಿ ಪರಿವರ್ತಿಸಿದ ಹಿಂದೆ ಭಾರತದ ದಣಿವರಿಯದ ಶ್ರಮವಿದೆ ಎಂದರು.
‘ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಯೋಗ ದಿನವನ್ನು ಆರಂಭಿಸಿದ್ದು ಒಂದು ಮಹತ್ವದ ಮೈಲಿಗಲ್ಲಾಗಿದೆ ಮತ್ತು ಇದು ಭಾರತದ ಸಾಫ್ಟ್ ಪವರ್ನ್ನು ಪರಿಗಣನೆಯನ್ನು ತೋರಿಸುತ್ತದೆ’ ಎಂದಿದ್ದಾರೆ.
ಅನಿವಾಸಿ ಭಾರತೀಯರು ಭಾರತವನ್ನು ಪ್ರಗತಿ ಹೊಂದುವಂತೆ ಮಾಡಬಲ್ಲರು ಮತ್ತು ಭಾರತ ಇತರ ರಾಷ್ಟ್ರಗಳನ್ನು ಪ್ರಗತಿ ಹೊಂದುವಂತೆ ಮಾಡಬಲ್ಲದು ಎಂದಿದ್ದಾರೆ.
ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ, ಬೇಟಿ ಬಚಾವೂ ಬೇಟಿ ಪಡಾವೋದಂತಹ ಯೋಜನೆಗಳು ಭಾರತದ ದೂರದೃಷ್ಟಿ ಮತ್ತು ಸಮೃದ್ಧತೆಯನ್ನು ಪ್ರತಿನಿಧಿಸುತ್ತವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.