ಕೊಚ್ಚಿ: ಸಮುದ್ರ ಮಾರ್ಗವಾಗಿ ಭಾರತದ ಮೇಲಾಗುವ ಯಾವುದೇ ದಾಳಿಗಳನ್ನು ತಡೆಗಟ್ಟಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವ ಸಲುವಾಗಿ ಭಾರತೀಯ ನೌಕಾಸೇನೆಯು ಕೋಸ್ಟ್ ಗಾರ್ಡ್ ಮತ್ತಿತರ ಪಾಲುದಾರರೊಂದಿಗೆ ಸೇರಿ ಎರಡು ದಿನಗಳ ಸಮರಭ್ಯಾಸವನ್ನು ಆರಂಭಿಸಿದೆ.
ಮಂಗಳವಾರದಿಂದ ‘ಸೀ ವಿಜಿಲ್ 2019’ನ್ನು ಕೊಚ್ಚಿ ಸಮುದ್ರ ತೀರದಲ್ಲಿ ನಡೆಸಲಾಗುತ್ತಿದೆ. ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಮೊದಲ ಸಮರಭ್ಯಾಸವಾಗಿದೆ.
ಫಿಶ್ ಲ್ಯಾಂಡಿಂಗ್ ಸೆಂಟರ್, ಬೃಹತ್ ಮತ್ತು ಸಣ್ಣ ಬಂದರು, ಲೈಟ್ಹೌಸ್, ಕರಾವಳಿ ಪೊಲೀಸ್ ಸ್ಟೇಶನ್, ಕಂಟ್ರೋಲ್ ರೂಮ್, ಆಪರೇಶನ್ ರೂಮ್ ಇತ್ಯಾದಿಗಳ ಭದ್ರತಾ ಪರಿಶೀಲನೆಗಳನ್ನು ನಡೆಸುವ ಸಲುವಾಗಿ ಕರಾವಳಿ ಜಿಲ್ಲೆಗಳಲ್ಲಿ ಮಲ್ಟಿ ಏಜೆನ್ಸಿ ತಂಡಗಳನ್ನು ನಿಯೋಜನೆಗೊಳಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟನೆಯಲ್ಲಿ ತಿಳಿಸಿದೆ.
ಸಮುದ್ರ ಮಾರ್ಗವಾಗಿ ಶತ್ರುಗಳಿಂದ ಬರುವ ಬೆದರಿಕೆ, ಒಳನುಸುಳುವಿಕೆಗಳನ್ನು ತಡೆಗಟ್ಟಲು ದೇಶ ಎಷ್ಟರ ಮಟ್ಟಿಗೆ ಸಿದ್ಧವಾಗಿದೆ ಎಂಬುದನ್ನು ಪರೀಕ್ಷಿಸುವ ಸಲುವಾಗಿ ಈ ಸಮರಾಭ್ಯಾಸವನ್ನು ನಡೆಸಲಾಗುತ್ತಿದೆ.
#IndianNavy commences the largest coastal Defence exercise off the Indian Coast. Code named Ex Sea Vigil, it covers the entire coastline of 7516.6 kms & Exclusive Economic Zone of India @SpokespersonMoD @DefenceMinIndia @IndiaCoastGuard pic.twitter.com/p67fYsj4Cr
— SpokespersonNavy (@indiannavy) January 22, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.