ನವದೆಹಲಿ: 2018ರ ಎಲ್ಲಾ ಐಸಿಸಿ ಅವಾರ್ಡ್ಸ್ ತಮ್ಮದಾಗಿಸಿಕೊಳ್ಳುವ ಮೂಲಕ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರು ಇತಿಹಾಸ ಬರೆದಿದ್ದಾರೆ.
ಐಸಿಸಿ ಕ್ರಿಕೆಟರ್ ಆಫ್ ದಿ ಇಯರ್ಗೆ ನೀಡುವ ಸಿರ್ ಗ್ಯಾರಿಫೀಲ್ಡ್ ಸೋಬರ್ಸ್ ಟ್ರೋಫಿ, ಐಸಿಸಿ ಮೆನ್ಸ್ ಟೆಸ್ಟ್ ಫ್ಲೇಯರ್ ಆಫ್ ದಿ ಇಯರ್ ಮತ್ತು ಐಸಿಸಿ ಒಡಿಐ ಪ್ಲೇಯರ್ ಆಫ್ ದಿ ಇಯರ್ ಅವಾರ್ಡ್ನ್ನು 2018ರ ಅತ್ಯದ್ಭುತ ಪ್ರದರ್ಶನಕ್ಕಾಗಿ ಕೊಹ್ಲಿ ಪಡೆದುಕೊಂಡಿದ್ದಾರೆ.
ಕ್ಯಾಪ್ಟನ್ ಆಫ್ ದಿ ಐಸಿಸಿ ಟೆಸ್ಟ್ ಮತ್ತು ಒಡಿಐ ಟೀಮ್ಸ್ ಆಫ್ ದಿ ಇಯರ್ನ್ನೂ ವಿರಾಟ್ ಕೊಹ್ಲಿ ಪಡೆದುಕೊಂಡಿದ್ದಾರೆ. 13 ಟೆಸ್ಟ್ ಮ್ಯಾಚ್ಗಳಲ್ಲಿ 1,322 ರನ್ಗಳನ್ನು ಗಳಿಸಿದ್ದಾರೆ. ಏಕದಿನದಲ್ಲಿ 1202 ರನ್, ಟಿ20ಯಲ್ಲಿ 211 ರನ್ ಗಳಿಸಿದ್ದಾರೆ.
ಈ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದಕ್ಕೆ ಅತೀವ ಸಂತೋಷವಾಗುತ್ತದೆ. ನನ್ನ ತಂಡವೂ 2018ರಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದೆ ಎಂದು ಕೊಹ್ಲಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.