ನವದೆಹಲಿ: ನೈರ್ಮಲ್ಯ ಅಭಿಯಾನವನ್ನು ಆರಂಭಿಸಿರುವ ಭಾರತೀಯ ರೈಲ್ವೇ, ಈ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಸ್ಟ್ ಕೋಸ್ಟ್ ರೈಲ್ವೇಸ್ ತನ್ನ 36 ರೈಲುಗಳಲ್ಲಿ 91 ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಮೆಶಿನ್ಗಳನ್ನು ಅಳವಡಿಸಿದೆ.
ಪುರಿ, ಭುವನೇಶ್ವರ ಮತ್ತು ವಿಶಾಖಪಟ್ಟಣಂನಿಂದ ಹೊರಡುವ ರೈಲುಗಳ ಹಲವಾರು ಕೋಚ್ಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಈ ಸ್ಯಾನಿಟರಿ ಪ್ಯಾಡ್ಗಳ ಬೆಲೆ ರೂ.5. ಪ್ರಯಾಣಿಕರು ವೆಂಡಿಂಗ್ ಮೆಶಿನ್ಗೆ 5 ರೂಪಾಯಿ ನಾಣ್ಯವನ್ನು ಹಾಕಿ ಇದನ್ನು ಪಡೆಯಬಹುದು. ಏಕಕಾಲದಲ್ಲಿ 75 ಪ್ಯಾಡ್ಗಳನ್ನು ಇದು ನೀಡಬಲ್ಲದು.
ಈಸ್ಟ್ ಕೋಸ್ಟ್ ರೈಲ್ವೇಸ್ ಹೊರತುಪಡಿಸಿ ಇತರ ವಲಯದ ರೈಲಿನಲ್ಲೂ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಶಿನ್ಗಳನ್ನು ಅಳವಡಿಸಲಾಗಿದ್ದು, ಮಹಿಳೆಯರಿಗೆ ಇದರಿಂದ ಸಾಕಷ್ಟು ಪ್ರಯೋಜನವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.