ನವದೆಹಲಿ: ರಫೆಲ್ ಥೀಮ್ನ ಮದುವೆ ಆಮಂತ್ರಣ ಪತ್ರಿಕೆಯನ್ನು ವಿನ್ಯಾಸಪಡಿಸಿದ್ದ ಗುಜರಾತಿನ ಜೋಡಿಗಳು ಪ್ರಧಾನಿ ನರೇಂದ್ರ ಮೋದಿಯವರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಬಿಜೆಪಿಗೆ ಮತ ಹಾಕುವುದೇ ನಮ್ಮ ಮದುವೆಗೆ ನೀಡುವ ಉಡುಗೊರೆ ಎಂದು ಪತ್ರಿಕೆಯಲ್ಲಿ ಉಲ್ಲೇಖಿಸಿದ್ದರು.
ಸೂರತ್ ಮೂಲದ ಯುವರಾಜ್ ಪೊಖರ್ನ ಮತ್ತು ಸಾಕ್ಷಿ ಅಗರ್ವಾಲ್ ಅವರ ಮದುವೆ ಜನವರಿ 22ರಂದು ನಡೆಯಲಿದ್ದು, ಇವರು ವಿನ್ಯಾಸಪಡಿಸಿರುವ ಆಮಂತ್ರಣ ಪತ್ರಿಕೆ ಭಾರೀ ಸುದ್ದಿ ಮಾಡಿತ್ತು. ಪತ್ರಿಕೆಯ ಉಭಯ ಬದಿಗಳಲ್ಲಿ ರಫೆಲ್ನ ಚಿತ್ರವನ್ನು ಹಾಕಿ, ಅದರ ಕೆಳಗೆ ರಫೆಲ್ನ ವಿಸ್ತೃತ ಮಾಹಿತಿಯನ್ನು ನೀಡಿದ್ದರು.
ಶಸ್ತ್ರಸಜ್ಜಿತ ಯುದ್ಧವಿಮಾನದ ದರವನ್ನು ಒಬ್ಬ ಮೂರ್ಖ ಕೂಡ ಸಾಮಾನ್ಯ ಯುದ್ಧವಿಮಾನದ ದರಕ್ಕೆ ಹೋಲಿಕೆ ಮಾಡಲಾರ ಎಂದು ಬರೆದುಕೊಂಡಿದ್ದರು. ಮೇಲೆ ‘ಕೀಪ್ ಕಾಮ್ ಟ್ರಸ್ಟ್ ನಮೋ’ ಎಂದು ಒಕ್ಕಣೆ ನೀಡಿದ್ದರು. ಪ್ರಧಾನಿಗಳಿಗೆ ಇದನ್ನು ಟ್ಯಾಗ್ ಮಾಡಿದ್ದರು.
ವಧುವಿನ ತಾಯಿಗೆ ಮೇಲ್ ಮಾಡಿರುವ ಪ್ರಧಾನಿಗಳು, ’ಯುವರಾಜ್ ಮತ್ತು ಸಾಕ್ಷಿ ಮದುವೆಯ ಸಂಭ್ರಮದಲ್ಲಿರುವ ಕುಟುಂಬಕ್ಕೆ ಅಭಿನಂದನೆಗಳು. ಆಮಂತ್ರಣ ಪತ್ರಿಕೆಯ ವಿಭಿನ್ನತೆಯನ್ನು ನಾನು ಗಮನಿಸಿದೆ. ಅದು ನಿಮ್ಮ ಕಾಳಜಿ ಮತ್ತು ದೇಶದ ಮೇಲಿನ ಭರವಸೆಯನ್ನು ತೋರಿಸುತ್ತದೆ. ಇದು ನನಗೆ ಇನ್ನಷ್ಟು ಶ್ರಮಪಟ್ಟು ಕೆಲಸ ಮಾಡಲು ಚೈತನ್ಯ ತುಂಬಿದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.