ನವದೆಹಲಿ: 2019-20ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತ ಜಿಡಿಪಿ ಶೇ.7.5ರಷ್ಟು ಪ್ರಗತಿಯಾಗಲಿದ್ದು, 2020-21ರ ಸಾಲಿನಲ್ಲಿ ಶೇ.7.7ರಷ್ಟು ಪ್ರಗತಿಯಾಗಲಿದೆ ಎಂದು ಇಂಟರ್ನ್ಯಾಷನಲ್ ಮಾನಿಟರಿ ಫಂಡ್ನ ವರ್ಲ್ಡ್ ಎಕನಾಮಿಕ್ ಔಟ್ಲುಕ್ ವರದಿ ಹೇಳಿದೆ.
ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಮುಖ್ಯಸ್ಥೆ ಗೀತಾ ಗೋಪಿನಾಥ್ ಅವರು, ಮಾನಿಟರಿ ಫಂಡ್ನ ವರ್ಲ್ಡ್ ಎಕನಾಮಿಕ್ ಔಟ್ಲುಕ್ನ್ನು ಬಿಡುಗಡೆಗೊಳಿಸಿದ್ದು, ಭಾರತ ವೇಗದಲ್ಲಿ ಬೆಳೆಯುತ್ತಿರುವ ವಿಶ್ವದ ಪ್ರಮುಖ ಆರ್ಥಿಕತೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ವಿಶ್ವಬ್ಯಾಂಕ್ ಇತ್ತೀಚಿಗೆ ಬಿಡುಗಡೆಗೊಳಿಸಿದ ಅಂದಾಜು ಲೆಕ್ಕಾಚಾರಗಳು ಮತ್ತು ಇಂಟರ್ನ್ಯಾಷನಲ್ ಮಾನಿಟರಿ ಫಂಡ್ನ ಲೆಕ್ಕಾಚಾರಗಳು ತಾಳೆಯಾಗುತ್ತಿರುವುದು ಗಮನಾರ್ಹವಾಗಿದೆ. ವಿಶ್ವ ಬ್ಯಾಂಕ್ ತುಸು ಕಡಿಮೆ ಅಂದರೆ 2020-21ರ ವೇಳಗೆ ಭಾರತದ ಜಿಡಿಪಿ ಶೇ.7.5 ಎಂದು ಹೇಳಿತ್ತು.
ಇಂಟರ್ನ್ಯಾಷನಲ್ ಮಾನಿಟರಿ ಫಂಡ್ನ ವರದಿಯು, 2019ರಲ್ಲಿ ಭಾರತ ಆರ್ಥಿಕತೆ ಏರಿಕೆ ಕಾಣಲಿದೆ, ಕಡಿಮೆ ತೈಲ ಬೆಲೆಯಿಂದ ಪ್ರಯೋಜನ ಪಡೆಯಲಿದೆ ಎಂದಿದೆ.
SOURCE: www.india.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.