ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ಶಿವೈಕ್ಯರಾಗಿದ್ದು, ಈ ನಾಡು ಶೋಕ ಸಾಗರದಲ್ಲಿ ಮುಳುಗಿದೆ. ಗಣ್ಯಾತಿಗಣ್ಯರು ಸಂತಶ್ರೇಷ್ಠನ ಅಗಲುವಿಕೆಗೆ ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ ಮಾಡಿ “ಪವಿತ್ರಾತ್ಮ ಡಾ|| ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ಜನರಿಗಾಗಿ ಅದರಲ್ಲೂ ಬಡವರು ಮತ್ತು ದೀನರಿಗಾಗಿ ಬದುಕಿದರು. ಬಡತನ, ಹಸಿವನ್ನು ನೀಗಿಸಲು ಮತ್ತು ಸಾಮಾಜಿಕ ನ್ಯಾಯದ ಸ್ಥಾಪನೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು.ವಿಶ್ವದಾದ್ಯಂತ ಇರುವ ಅವರ ಅಪಾರ ಭಕ್ತವರ್ಗದೊಂದಿಗೆ ನಮ್ಮ ಪ್ರಾರ್ಥನೆ ಇದೆ” ಎಂದಿದ್ದಾರೆ.
His Holiness Dr. Sree Sree Sree Sivakumara Swamigalu lived for the people, especially the poor and vulnerable. He devoted himself towards alleviating ills like poverty, hunger and social injustice.
Prayers and solidarity with his countless devotees spread all across the world. pic.twitter.com/AqgOLgqTrn
— Narendra Modi (@narendramodi) January 21, 2019
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಸಂತಶ್ರೇಷ್ಠನ ಅಗಲುವಿಕೆಗೆ ಸಂತಾಪ ಸೂಚಿಸಿದ್ದಾರೆ.
Extremely sad to learn of the passing of spiritual leader Dr Sree Sree Sree Sivakumara Swamigalu Ji. He contributed immensely to society particularly towards healthcare and education. My condolences to his countless followers #PresidentKovind
— President of India (@rashtrapatibhvn) January 21, 2019
I am sorry to hear about the passing of Shivakumar Swami Ji, Pontiff of the Siddaganga Mutt. Swami Ji was respected & revered by millions of Indians, from all religions & communities. His passing leaves behind a deep spiritual void. My condolences to all his followers.
— Rahul Gandhi (@RahulGandhi) January 21, 2019
ಸಿಎಂ ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪನವರು ನಾಡಿನ ಶೋಕದಲ್ಲಿ ಭಾಗಿಯಾಗಿದ್ದಾರೆ.
ನಡೆದಾಡುವ ದೇವರು ಶ್ರೀ ಶಿವಕುಮಾರ ಶ್ರೀಗಳು ದೈವಾಧೀನರಾಗಿದ್ದು ಅಪಾರ ನೋವು ತರಿಸಿದೆ. ಇವರ ಅಗಲಿಕೆಯಿಂದ ದೇಶವೇ ಬಡವಾಗಿದೆ. ಯಾವುದೇ ಸಂದರ್ಭದಲ್ಲೂ ಸಲಹೆ, ಸೂಚನೆ ನೀಡುತ್ತಿದ್ದ ಇವರು ದೂರವಾಗಿದ್ದು ವೈಯಕ್ತಿಕವಾಗಿ ತುಂಬಾ ನಷ್ಟವನ್ನುಂಟು ಮಾಡಿದೆ. ಶ್ರೀಗಳ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಅವರ ಲಕ್ಷಾಂತರ ಭಕ್ತರಿಗೆ ದೇವರು ಕರುಣಿಸಲಿ. pic.twitter.com/cYzjT6H3hh
— B.S. Yeddyurappa (@BSYBJP) January 21, 2019
ಶ್ರೀಗಳ ನಿಧನದಿಂದಾಗಿ ನಾಳೆ ರಾಜ್ಯದಲ್ಲಿ ಸರ್ಕಾರಿ ರಜೆಯನ್ನು ಘೋಷಿಸಲಾಗಿದ್ದು, 3 ದಿನಗಳ ಶೋಕಾಚರಣೆಯನ್ನು ಘೋಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.