ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ ಪ್ರಮುಖ ಉದ್ಯಮಿಗಳ ಬೆಂಬಲಗಳು ಸಿಗುತ್ತಿವೆ. ಎರಡನೇ ಬಾರಿಗೆ ಮೋದಿ ಪ್ರಧಾನಿಯಾಗಬೇಕು ಎಂಬುದು ಇವರ ಆಶಯವಾಗಿದೆ.
‘ನರೇಂದ್ರ ಮೋದಿಯವರು ಮತ್ತೊಂದು ಬಾರಿಗೆ ಪ್ರಧಾನಿಯಾಗಲು ಅರ್ಹರಾಗಿದ್ದಾರೆ’ ಎಂದು ಖ್ಯಾತ ಉದ್ಯಮಿ ಸಜ್ಜನ್ ಜಿಂದಾಲ್ ಹೇಳಿದ್ದಾರೆ.
‘ವರ್ಷಗಳ ಹಿಂದೆ ನರೇಂದ್ರ ಮೋದಿ ಮತ್ತೊಂದು ಅವಧಿಗೆ ಚುನಾಯಿತರಾಗುವುದು ಸುಲಭ ಅನಿಸುತ್ತಿದ್ದು, ಇತ್ತೀಚಿನ ವಿಧಾನಸಬಾ ಚುನಾವಣೆಗಳ ಫಲಿತಾಂಶಗಳ ಬಳಿಕ ಕಷ್ಟ ಇದೆ ಅನಿಸುತ್ತಿದೆ. ಮತ್ತೊಂದು ಬಾರಿ ಅಧಿಕಾರಕ್ಕೆ ಅವರು ಬರಬೇಕು ಎಂಬುದು ನನ್ನ ವೈಯಕ್ತಿಕ ಆಶಯ. ಮೊದಲ ಅವಧಿಯಲ್ಲಿ ಸಾಧಿಸಲಾಗದನ್ನು ಎರಡನೇ ಅವಧಿಯಲ್ಲಿ ಅವರು ಖಂಡಿತಾ ಸಾಧಿಸುತ್ತಾರೆ. 10 ವರ್ಷಗಳು ಅವರಿಗೆ ಸಾಕಷ್ಟು ಪ್ರಯೋಜನವಾಗಲಿದೆ’ ಎಂದು ಅಭಿಪ್ರಾಯಿಸಿದ್ದಾರೆ.
ಎರಡನೇ ಅವಧಿಯಲ್ಲಿ ಅವರು ಹೂಡಿಕೆಗಳತ್ತ ಹೆಚ್ಚು ಗಮನ ಹರಿಸುತ್ತಾರೆ ಎಂದು ನಂಬಿದ್ದೇನೆ. ಉದ್ಯಮದಲ್ಲಿರುವುದು ಸರ್ಕಾರದ ಉದ್ಯಮವಲ್ಲ ಎಂಬುದು ಅವರ ತತ್ವವಾಗಿದೆ ಎಂದಿದ್ದಾರೆ.
ಸಜ್ಜನ್ ಜಿಂದಾಲ್ ಅವರು, ಜೆಎಸ್ಡಬ್ಲ್ಯೂ ಗ್ರೂಪ್ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.