ರಾಷ್ಟ್ರದ ಅತೀದೊಡ್ಡ ಸರ್ಕಾರೇತರ ಸಂಸ್ಥೆಗಳಲ್ಲಿ ಒಂದಾದ ಪ್ರಥಮ್ನ ಶಿಕ್ಷಣ ವರದಿಯ ವಾರ್ಷಿಕ ಸ್ಥಿತಿ(ASER) 2018 ಹೊರಬಿದ್ದಿದೆ. ಈ ವರದಿ ಅನೇಕ ಉತ್ತೇಜನದಾಯಕ ಅಂಶಗಳನ್ನು ಒಳಗೊಂಡಿದೆ ಮತ್ತು ಸರ್ಕಾರ ಇನ್ನೂ ಮಾಡಬೇಕಾದ ಬಹಳಷ್ಟು ಕಾರ್ಯಗಳ ಬಗ್ಗೆ ಇದು ಬೆಳಕು ಚೆಲ್ಲಿದೆ.
ಈ ವರದಿಯ ಪ್ರಕಾರ, 2ನೇ ತರಗತಿಯ ಪುಸ್ತಕವನ್ನು ಓದುವ ಸಾಮರ್ಥ್ಯವುಳ್ಳ 5ನೇ ತರಗತಿ ಮಕ್ಕಳ ಸಂಖ್ಯೆ 2012ಕ್ಕೆ ಹೋಲಿಸಿದರೆ ಅರ್ಧದಷ್ಟು (ಶೇ.50.54 ರಷ್ಟು) ಹೆಚ್ಚಾಗಿದೆ. 2012ರಲ್ಲಿ ಈ ಪ್ರಮಾಣ ಶೇ46.9ರಷ್ಟು ಇತ್ತು. ಪ್ರಾಥಮಿಕ ಶಾಲೆಗಳಲ್ಲಿ (1 ರಿಂದ 5ನೇ ತರಗತಿ) ಮಕ್ಕಳ ಕಾರ್ಯಕ್ಷಮತೆ ತೃಪ್ತಿಕರ ಮಟ್ಟದಿಂದ ಇನ್ನೂ ಕೆಳಗಿದೆ. ಆದರೆ ಓದುವಿಕೆ ಮತ್ತು ಗಣಿತ ಕೌಶಲಗಳಲ್ಲಿ ಗಣನೀಯ ಸುಧಾರಣೆ ಕಂಡು ಬಂದಿದೆ. ಸರ್ಕಾರಿ ಶಾಲೆಗಳ ಸುಧಾರಣೆ ಇಲ್ಲಿ ಗಮನಾರ್ಹ ಸಾಧನೆಯಾಗಿದೆ.
ಸರಳ ವಿಭಾಗವನ್ನು ನಿರ್ವಹಿಸಬಲ್ಲ ಸಾಮರ್ಥ್ಯವುಳ್ಳ ಮಕ್ಕಳ ಪ್ರಮಾಣ 2012ರಲ್ಲಿ ಶೇ 24.09ರಷ್ಟು ಇದ್ದು, 2018ರಲ್ಲಿ ಶೇ.27.9ಕ್ಕೆ ಏರಿಕೆಯಾಗಿದೆ. 1ನೇ ಕ್ಲಾಸ್ ಪುಸ್ತಕ ಓದಬಲ್ಲ 3ನೇ ಕ್ಲಾಸ್ ಮಕ್ಕಳ ಪ್ರಮಾಣ ಶೇ.27.2ರಷ್ಟು ಏರಿಕೆಯಾಗಿದೆ. 2010ರಲ್ಲಿ ಇದು ಶೇ.19.5ರಷ್ಟು ಇತ್ತು. ಓದುವಿಕೆ ಮತ್ತು ಗಣಿತ ಕೌಶಲದಲ್ಲಿ ಹಿಮಾಚಲ ಪ್ರದೇಶ, ಉತ್ತರಪ್ರದೇಶ, ಒರಿಸ್ಸಾ, ಛತ್ತೀಸ್ಗಢ, ಕರ್ನಾಟಕ, ಕೇರಳ, ಮಿಜೋರಾಂ ಮತ್ತು ಅರುಣಾಚಲಪ್ರದೇಶಗಳಲ್ಲಿ 2016ಕ್ಕಿಂತ ಶೇ.5ರಷ್ಟು ಹೆಚ್ಚಿನ ಸುಧಾರಣೆ ಕಂಡಿದೆ.
ಛತ್ತೀಸ್ಗಢ ರಾಜ್ಯದಲ್ಲಿ, 2016 ರಲ್ಲಿ 5ನೇ ಕ್ಲಾಸ್ ಮಕ್ಕಳ ಓದುವಿಕೆ ಮಟ್ಟವು ಶೇ.201.6ರಿಂದ ಶೇ.56ರಷ್ಟು ಇದ್ದು, 2018ರಲ್ಲಿ ಅದು 59.6ಕ್ಕೆ ಏರಿಕೆಯಾಗಿದೆ. ಕೇವಲ 2 ವರ್ಷಗಳಲ್ಲಿ ಶೇ3.6ರಷ್ಟು ಬೆಳವಣಿಗೆಯನ್ನು ಕಂಡಿದೆ. ಈ ಬದಲಾವಣೆಗಳಿಗೆ ಸರ್ಕಾರಿ ಶಾಲೆಗಳು ಕಾರಣವಾಗಿರುವುದು ಕುತೂಹಲಕಾರಿ ಸಂಗತಿಯಾಗಿದೆ. ಸರ್ಕಾರಿ ಶಾಲೆಗಳು ಶೇ.6.1ರಷ್ಟು ಸುಧಾರಣೆ ದಾಖಲಿಸಿದ್ದು, ಖಾಸಗಿ ಶಾಲೆಗಳು ಶೇ.5.7ರಷ್ಟು ಸುಧಾರಣೆ ಕಂಡಿವೆ. ಈ ಸಾಧನೆಯ ಶ್ರೇಯಸ್ಸು ಇಲ್ಲಿನ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಒಂದೂವರೆ ದಶಕಗಳ ಆಡಳಿತಕ್ಕೆ ಸಲ್ಲುತ್ತದೆ. ರಮಣ್ ಸಿಂಗ್ ಅವರು, ಶಿಕ್ಷಣ ವಲಯದಲ್ಲಿ ಭಾರೀ ಪ್ರಮಾಣದಲ್ಲಿ ಬಂಡವಾಳ ಹೂಡಿದರು. ಅಲ್ಲದೇ, ಶಿಕ್ಷಣದ ವಿಷಯದಲ್ಲಿ ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶಗಳಿಗೆ ವಿಶೇಷ ಗಮನವನ್ನು ನೀಡಿದ್ದರು.
ASER ಸೆಂಟರ್ ನಿರ್ದೇಶಕ ವಿಲಿಮಾ ವಾಧ್ವಾ ಅವರು ಈ ಬೆಳವಣಿಗೆಯನ್ನು “ಬಹಳ ಸ್ವಾಗತಾರ್ಹ” ಬೆಳವಣಿಗೆ ಎಂದು ಕರೆದಿದ್ದಾರೆ. “ಪಂಜಾಬ್ ಮತ್ತು ಮಹಾರಾಷ್ಟ್ರ ಮುಂತಾದ ಕೆಲವು ರಾಜ್ಯಗಳಲ್ಲಿ ರಾಜ್ಯ ಸರ್ಕಾರಗಳು ಬೋಧನಾ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿವೆ ಎಂದು ನಮಗೆ ಈಗಾಗಲೇ ತಿಳಿದಿದೆ. ಆದರೆ ಉತ್ತರಪ್ರದೇಶದಂತಹ ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳು ದಾಖಲಿಸಿದ ಬೆಳವಣಿಗೆ ನಮಗೆ ಅನಿರೀಕ್ಷಿತವಾಗಿದೆ” ಎಂದು ವಾಧ್ವಾ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿನ ಸರಕಾರಿ ಶಾಲೆಗಳು ಓದುವ ಮತ್ತು ಗಣಿತ ಕೌಶಲ್ಯಗಳಲ್ಲಿ ಗಣನೀಯ ಸುಧಾರಣೆಗಳನ್ನು ಕಂಡಿವೆ. ಖಾಸಗಿ ಶಾಲೆಗಳು ಶೇ7.6ರಷ್ಟು ಸುಧಾರಣೆ ದಾಖಲಿಸಿದರೆ, ಸರ್ಕಾರಿ ಶಾಲೆಗಳ ಓದುವ ಕೌಶಲ್ಯಗಳು ಶೇ.11ರಷ್ಟು ಸುಧಾರಿಸಿದೆ. ಇದು ಯೋಗಿ ಸರ್ಕಾರಕ್ಕೆ ಬೃಹತ್ ಪ್ರೋತ್ಸಾಹಕವಾಗಿದೆ. ಈ ಸರ್ಕಾರ ಶಾಲೆಗಳಲ್ಲಿನ ರಾಷ್ಟ್ರೀಯ ಶಿಕ್ಷಣ ಕೌನ್ಸಿಲ್ ಆಫ್ ಎಜುಕೇಶನ್ ರಿಸರ್ಚ್ ಅಂಡ್ ಟ್ರೈನಿಂಗ್ (ಎನ್ಸಿಇಆರ್ಟಿ) ಪಠ್ಯಕ್ರಮವನ್ನು ಅನುಷ್ಠಾನಗೊಳಿಸುವುದು ಸೇರಿದಂತೆ ರಾಜ್ಯದ ಪ್ರಾಥಮಿಕ ಶಿಕ್ಷಣ ನೀತಿಗಳಲ್ಲಿ ಕೆಲವು ಕಠಿಣ ಸುಧಾರಣೆಗಳನ್ನು ತಂದಿದೆ. ಅಖಿಲೇಶ್ ಯಾದವ್ ಮತ್ತು ಮಾಯಾವತಿ ಸರ್ಕಾರಗಳ ನೀತಿಗಳಿಂದಾಗಿ ಕೆಳಮಟ್ಟಕ್ಕೆ ಇಳಿದಿದ್ದ ಪ್ರಾಥಮಿಕ ಶಿಕ್ಷಣವನ್ನು ಸುಧಾರಿಸುವ ನಿಟ್ಟಿನಲ್ಲಿ ಯೋಗಿ ಸರ್ಕಾರ ಸಾಕಷ್ಟು ಪ್ರಯತ್ನ ಆರಂಭಿಸಿದೆ.
ಸರ್ಕಾರದ “ಸ್ವಂತ ಕಲಿಕೆ”ಯ ಪ್ರಯತ್ನದಿಂದಾಗಿ ಪ್ರಾಥಮಿಕ ಶಾಲೆಗಳ ಕಲಿಕೆಯ ಮಟ್ಟವು ಗಮನಾರ್ಹ ಸುಧಾರಣೆ ಕಂಡಿದೆ ಎಂದು ವಾದ್ವ ಹೇಳಿದ್ದಾರೆ. ಹಿಂದಿನ ಸರಕಾರವು ಶಿಕ್ಷಣ ಹಕ್ಕು ಕಾಯಿದೆಯನ್ನು ತಂದಿತು, ಆದರೆ ಗಡಿ ಗೋಡೆಗಳನ್ನು ನಿರ್ಮಿಸಿ ಶಿಕ್ಷಣವನ್ನು ಗೊಂದಲಮಯವನ್ನಾಗಿಸಿತು. ಈಗಿನ ಸರಕಾರ ಗಡಿ ಗೋಡೆಗಳನ್ನು ನಿರ್ಮಿಸುವ ಬದಲು ಫಲಿತಾಂಶ ಆಧಾರಿತ ಕಲಿಕೆಗೆ ಹೆಚ್ಚಿನ ಒತ್ತನ್ನು ನೀಡುತ್ತಿದೆ. “ನಾವು ನಮ್ಮ ಮೊದಲ ASER ಅನ್ನು 2005ರಲ್ಲಿ ಮಾಡಿದಾಗ, ಯಾರೂ ಕಲಿಕೆಯ ಬಗ್ಗೆ ಮಾತನಾಡಲಿಲ್ಲ. ನಂತರ ಶಿಕ್ಷಣದ ಹಕ್ಕು ಬಂದಿತು. ಇದರಿಂದ ಗಮನವು ನೋಂದಣಿ ಮತ್ತು ಮೂಲಸೌಕರ್ಯಕ್ಕೆ ಬದಲಾಯಿತು. ಆಟದ ಮೈದಾನ, ಗಡಿ ಗೋಡೆ, ಇತ್ಯಾದಿ. ಆದರೆ ಈಗ, ಹಲವಾರು ರಾಜ್ಯಗಳಲ್ಲಿ ಸ್ಥಿರ ಪ್ರಯತ್ನವಿದೆ. ಉದಾಹರಣೆಗೆ ಪಂಜಾಬ್, ಪಾಡೋ ಪಂಜಾಬ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ, ಇದು ಪ್ರಥಮ್ ಸಂಸ್ಥೆಯ ಬೋಧನಾ ಮಾದರಿಯನ್ನು ಅನುಸರಿಸುತ್ತದೆ. ದೆಹಲಿಯು ಬಹಳ ಒಳ್ಳೆಯ ಕೆಲಸ ಮಾಡುತ್ತಿದೆ. ಕಲಿಕೆಯ ದಿಕ್ಕಿನಲ್ಲಿ ಮಹತ್ವದ ಸಾಧನೆ ಮಾಡುತ್ತಿದೆ “ಎಂದು ವಾದ್ವ ಹೇಳಿದ್ದಾರೆ.
ASER ವಾರ್ಷಿಕ ಮನೆ ಮನೆಯ ಸಮೀಕ್ಷೆಯಾಗಿದೆ. ಈ ಸಮೀಕ್ಷೆ ದೇಶಾದ್ಯಂತದ 597 ಗ್ರಾಮೀಣ ಜಿಲ್ಲೆಗಳ 5.46 ಲಕ್ಷ ಮಕ್ಕಳನ್ನು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.