ಸುಳ್ಯ: ಸುಳ್ಯ ನಗರ ಪಂಚಾಯತ್ನ 2015-16ನೇ ಸಾಲಿನ ಬಜೆಟನ್ನು ಅಧ್ಯಕ್ಷ ಎನ್.ಎ.ರಾಮಚಂದ್ರ ಮಂಡಿಸಿದರು. 48.34 ಲಕ್ಷ ರೂ.ಗಳ ಮಿಗತೆ ಬಜೆಟ್ನ್ನು ಅವರು ಮಂಡಿಸಿದ್ದಾರೆ. 2015-16 ನೇ ಸಾಲಿನ ಆಯವ್ಯಯದಲ್ಲಿ ಪ್ರಸ್ತುತ ವರ್ಷದಲ್ಲಿ 6.62 ಕೋಟಿಯ ಆದಾಯ ಮತ್ತು 7.99 ಕೋಟಿ ರೂ ಖರ್ಚನ್ನು ನಿರೀಕ್ಷಿಸಲಾಗಿದೆ.
ಉಪಾಧ್ಯಕ್ಷೆ ಮೀನಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಮುಖ್ಯಾಧಿಕಾರಿ ಚಂದ್ರಕುಮಾರ್ ಉಪಸ್ಥಿತರಿದ್ದರು.
ವಾಸ್ತವಕ್ಕೆ ವಿರುದ್ಧವಾದ ಬಜೆಟ್-ವಿಪಕ್ಷ ಟೀಕೆ: ನಗರ ಪಂಚಾಯತ್ ಬಜೆಟ್ ವಾಸ್ತವಕ್ಕೆ ವಿರುದ್ಧವಾಗಿದೆ. ಕೇವಲ ಹಳೆಯ ಕಡತಗಳನ್ನು ತಿರುವಿಹಾಕಿ ತಯಾರಿಸಿದ ಚರ್ವಿತ ಚರ್ವಣದಂತೆ ಬಜೆಟ್ ಇದೆ ಎಂದು ವಿಪಕ್ಷ ಸದಸ್ಯರು ಟೀಕಿಸಿದ್ದಾರೆ. ವಿಪಕ್ಷ ಕಾಂಗ್ರೆಸ್ ಸದಸ್ಯರಾದ ಕೆ.ಎಂ.ಮುಸ್ತಫಾ ಮತ್ತು ಕೆ.ಗೋಕುಲ್ದಾಸ್ ಮಾತನಾಡಿ ಬಜೆಟ್ನಲ್ಲಿ ಆಶ್ರಯ ನಿವೇಶನದ ರಚನೆ, ರುದ್ರಭೂಮಿಯ ಅಭಿವೃದ್ಧಿಯ ಪ್ರಸ್ತಾಪ ಇಲ್ಲ ಎಂದರು.
ನಗರದಲ್ಲಿ ಆಸ್ತಿ ತೆರಿಗೆ ಕೇವಲ 64ಲಕ್ಷ ಎಂದು ತೋರಿಸಿದ್ದಾರೆ. ನಗರದಲ್ಲಿ ಮೂರು ಕೋಟಿಗಿಂತಲೂ ಹೆಚ್ಚು ತೆರಿಗೆ ಸಂಗ್ರಹವಾಗ ಬೇಕಾದಷ್ಟು ಕಟ್ಟಡಗಳು, ವಾಣೀಜ್ಯ ಸಂಸ್ಥೆಗಳು, ಮನೆಗಳು ಇವೆ ಎಂದರು. ಬಜೆಟ್ ನಗರದ ಅಭಿವೃದ್ಧಿಗೆ ಪೂರಕವಾಗಿಲ್ಲ ಎಂದು ವಿಪಕ್ಷ ಸದಸ್ಯರು ಟೀಕಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.