ನವದೆಹಲಿ: ಕೇವಲ ಶೌಚಾಲಯ ನಿರ್ಮಾಣ ಮಾಡುವುದು ಮಾತ್ರವಲ್ಲ, ಅದನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿ ಇಟ್ಟುಕೊಳ್ಳಬೇಕಾದ ಅವಶ್ಯಕತೆಯೂ ಇದೆ. ಇದೇ ಕಾರಣಕ್ಕೆ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ‘ಸ್ವಚ್ಛ ಸುಂದರ್ ಶೌಚಾಲಯ ಕಂಟೆಸ್ಟ್’ನ್ನು ಆರಂಭಿಸಿದೆ. ಇದರಿಂದಾಗಿ 10 ಲಕ್ಷಕ್ಕೂ ಅಧಿಕ ಗ್ರಾಮೀಣ ಭಾಗದ ಶೌಚಾಲಯಗಳು ಸುಂದರವಾದ ‘ಸ್ವಚ್ಛ ಭಾರತ’ ಸಂದೇಶವುಳ್ಳ ಚಿತ್ತಾರಗಳಿಂದ ಕಂಗೊಳಿಸುತ್ತಿದೆ.
ಜನವರಿ 1ರಂದು ಒಂದು ತಿಂಗಳ ಈ ಕಂಟೆಸ್ಟ್ ಆರಂಭಗೊಂಡಿದ್ದು, ಪ್ರತಿ ಜಿಲ್ಲೆ, ಗ್ರಾಮಗಳು ಈ ಕಂಟೆಸ್ಟ್ನಡಿ ತಮ್ಮ ಶೌಚಾಲಯಗಳನ್ನು ಭಿತ್ತಿಚಿತ್ರ, ಸ್ಥಳಿಯ ಕಲಾಕೃತಿಗಳ ಮೂಲಕ ಅಲಂಕರಿಸಿವೆ. ಮಾತ್ರವಲ್ಲ, ಸ್ವಚ್ಛಭಾರತದ ಬಗೆಗಿನ ಆಕರ್ಷಕ ಘೋಷಣೆಗಳನ್ನು ಬರೆದಿವೆ.
ಈ ಶೌಚಾಲಯಗಳ ಫೋಟೋಗಳನ್ನು ಉತ್ತಮ ಸಂದೇಶಗಳೊಂದಿಗೆ ಸರ್ಕಾರಿ ಪೋರ್ಟಲ್ಗೆ ಅಪ್ಲೋಡ್ ಮಾಡಬೇಕಾಗಿದೆ. ಇದಕ್ಕಾಗಿ #MyIzzatGhar ನೀಡಲಾಗಿದೆ. ಇವುಗಳನ್ನು ಪರಿಶೀಲಿಸಲು ಜಡ್ಜ್ಗಳನ್ನು ನೇಮಕ ಮಾಡಲಾಗಿದ್ದು, ಅವರು ಅಂತಿಮ ವಿಜೇತರನ್ನು ಆಯ್ಕೆ ಮಾಡಲಿದ್ದಾರೆ.
ಅತ್ಯಂತ ನಾವೀಣ್ಯ ಪೇಟಿಂಗ್ ಹೊಂದಿದ ಟಾಯ್ಲೆಟ್, ಹೆಚ್ಚು ಸುಂದರ ಟಾಯ್ಲೆಟ್ ಹೊಂದಿದ ಜಿಲ್ಲೆಗಳಿಗೆ ಪ್ರಶಸ್ತಿಗಳು ಸಿಗಲಿವೆ.
Supporting the change towards a cleaner and healthier tomorrow, people in rural #India together achieved yet another milestone. More than 10 lakh toilets were painted by communities across 475 districts in 28 states under the #Swachh Sundar Shauchalaya contest. #MyIzzatGhar pic.twitter.com/CvU1CvAo1c
— Swachh Bharat (@swachhbharat) January 17, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.