ನವದೆಹಲಿ: ‘ಯುವ ವಿಜ್ಞಾನಿ ಕಾರ್ಯಕ್ರಮ’ದಡಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ದೇಶದಾದ್ಯಂತದ 100 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ ಸಣ್ಣ ಸೆಟ್ಲೈಟ್ ನಿರ್ಮಾಣದ ಬಗೆಗಿನ ತರಬೇತಿಯನ್ನು ನೀಡಲಿದೆ.
ಇಸ್ರೋ ಮುಖ್ಯಸ್ಥ ಕೆ.ಸಿವನ್ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಯುವ ಜನತೆಯನ್ನು ಆಕರ್ಷಿಸುವ ಮತ್ತು ಅವರಲ್ಲಿ ವಿಜ್ಞಾನದ ಬಗ್ಗೆ ಅರಿವನ್ನು ಮೂಡಿಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದಿದ್ದಾರೆ.
29 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 8ನೇ ತರಗತಿಯ ತಲಾ 3 ವಿದ್ಯಾರ್ಥಿಗಳು ಇದಕ್ಕೆ ಆಯ್ಕೆಗೊಳ್ಳಲಿದ್ದಾರೆ. ಇವರಿಗೆ ಇಸ್ರೋ ವಿಜ್ಞಾನಿಗಳು ಉಪನ್ಯಾಸ ನೀಡಲಿದ್ದಾರೆ ಮತ್ತು ಅವರಿಗೆ ಇಸ್ರೋದ ಪ್ರಯೋಗಶಾಲೆಯಲ್ಲಿ ತರಬೇತಿ ನೀಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಅನುದಾನವನ್ನು ಸಂಪೂರ್ಣವಾಗಿ ಇಸ್ರೋವೇ ನೀಡಲಿದೆ.
‘ಸಣ್ಣ ಸೆಟ್ಲೈಟ್ ನಿರ್ಮಾಣದ ವಾಸ್ತವ ಅನುಭವವನ್ನು ನೀಡುವ ಉದ್ದೇಶ ನಮ್ಮದಾಗಿದ್ದು, ನಿರ್ಮಿಸಿದ ಸೆಟ್ಲೈಟ್ ಉತ್ತಮವಾಗಿದ್ದರೆ ಅದನ್ನು ಉಡಾಯಿಸುವ ಅವಕಾಶವೂ ಅವರಿಗೆ ಸಿಗಲಿದೆ’ ಎಂದು ಸಿವನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.