ನವದೆಹಲಿ: ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಅವರು ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಗೆ ನಾಮನಿರ್ದೇಶನಗೊಂಡ ಭಾರತದ ಮೊತ್ತ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಲಾರೆಸ್ ಸ್ಪೋರ್ಟ್ಸ್ ಅವಾರ್ಡ್ ವಿವಿಧ 7 ಕೆಟಗರಿಯನ್ನು ಹೊಂದಿದ್ದು, ಇದರಲ್ಲಿ ಒಂದು ಕೆಟಗರಿಯಡಿ 24 ವರ್ಷದ ಹರಿಯಾಣ ಮೂಲದ ಕುಸ್ತಿಪಟು ಫೋಗಟ್ ನಾಮನಿರ್ದೇಶನಗೊಂಡಿದ್ದಾರೆ.
ವರ್ಷದ ಅತ್ಯುನ್ನತ ಸಾಧಕ ವ್ಯಕ್ತಿಗಳಿಗೆ ಮತ್ತು ತಂಡಗಳಿಗೆ ಈ ಪ್ರತಿಷ್ಠಿತ ಅವಾರ್ಡ್ನ್ನು ನೀಡಲಾಗುತ್ತದೆ. 2004ರಲ್ಲಿ ಕಲಹದ ನಡುವೆಯೂ ಕ್ರಿಕೆಟ್ ಆಡಿದ್ದ ಕಾರಣಕ್ಕೆ ಭಾರತ ಮತ್ತು ಪಾಕಿಸ್ಥಾನ ತಂಡಗಳಿಗೆ ಲಾರೆಸ್ ಸ್ಪೋರ್ಟ್ಸ್ ಫಾರ್ ಗುಡ್ ಅವಾರ್ಡ್ನ್ನು ನೀಡಲಾಗಿತ್ತು. 2014ರಲ್ಲಿ ಭಾರತದ ಮ್ಯಾಜಿಕ್ ಬಸ್ಗೆ ಈ ಅವಾರ್ಡ್ ಸಿಕ್ಕಿತ್ತು.
ಆದರೀಗ ವಿನೇಶ್ ಅವರು ವೈಯಕ್ತಿಕವಾಗಿ ಈ ಅವಾರ್ಡ್ಗೆ ನಾಮನಿರ್ದೇಶನಗೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
source: timesofindia
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.