ನವದೆಹಲಿ: ದೇಶದ ಯುವ ಜನತೆಯ ಕನಸು ಮತ್ತು ಆಶೋತ್ತರಗಳನ್ನು ಪೂರೈಸಲು ಬಿಜೆಪಿ ಸಂಪೂರ್ಣ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಜೆಪಿ ಯುವ ಮೋರ್ಚಾ ಮುಖ್ಯಸ್ಥೆ ಪೂನಂ ಮಹಾಜನ್ ಅವರು, ಪಕ್ಷದ ಪರ ಪ್ರಚಾರಕ್ಕಾಗಿ ವಿವಿಧ 7 ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಿದ ಹಿನ್ನಲೆಯಲ್ಲಿ ಅವರು ಈ ಮಾತು ಹೇಳಿದ್ದಾರೆ.
ಬಿಜೆಪಿ ಯುವ ಘಟಕ ’ವಿಜಯ ಲಕ್ಷ್ಯ 2019’ ಎಂಬ ಅಭಿಯಾನವನ್ನು ‘ಲಕ್ಷ್ಯ ಹಮಾರಾ, ಮೋದಿ ದುಬಾರಾ’ ಎಂಬ ಘೋಷ ವಾಕ್ಯದೊಂದಿಗೆ ಆರಂಭಿಸಿದೆ.
ಟ್ವಿಟ್ ಮಾಡಿರುವ ಮೋದಿ, ‘ವಿಜಯಲಕ್ಷ್ಯ 2019 ಚಳುವಳಿಗೆ ಸಜ್ಜಾಗಿರುವ ಕ್ರಿಯಾಶೀಲ ಬಿಜೆಪಿ ಯುವ ಘಟಕ ತಂಡಕ್ಕೆ ಅಭಿನಂದನೆಗಳು, ಈ ತಂಡ ದೇಶದಾದ್ಯಂತ ಯುವಶಕ್ತಿಯನ್ನು ಒಂದುಗೂಡಿಸಿ ಬಿಜೆಪಿಗೆ ಸ್ಪಷ್ಟ ಜನಾದೇಶ ದೊರಕಿಸಿ ಕೊಡಲಿದೆ. ಪ್ರತಿಭಾನ್ವಿತ ಯುವಕರ ಕನಸು ಮತ್ತು ಆಶೋತ್ತರಗಳನ್ನು ಈಡೇರಿಸಲು ಬಿಜೆಪಿ ಬದ್ಧವಾಗಿದೆ’ ಎಂದಿದ್ದಾರೆ.
I commend the energetic @BJYM team for their #VijayLaksh2019 movement that will mobilise Yuva Shakti from all over India on a large scale for a strong mandate for the BJP.
Our Party is fully committed to fulfilling the dreams and aspirations of our talented youngsters. #NaMoYuva https://t.co/A3BqY0p1i2— Narendra Modi (@narendramodi) January 17, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.