ನೊಯ್ಡಾ: ತಮ್ಮ ಸಾಕು ದನಗಳನ್ನು, ಇತರ ಪ್ರಾಣಿಗಳನ್ನು ಬೀದಿಯಲ್ಲಿ ಬಿಡುವ ಮಾಲೀಕರ ಮೇಲಿನ ದಂಡವನ್ನು ನೊಯ್ಡಾ ಜಿಲ್ಲಾಡಳಿತ ದುಪ್ಪಟ್ಟುಗೊಳಿಸಿದೆ. ಇನ್ನು ಮುಂದೆ ತಮ್ಮ ಪ್ರಾಣಿಗಳನ್ನು ಬೀದಿಯಲ್ಲಿ ಅಲೆಯುವಂತೆ ಮಾಡುವವರ ವಿರುದ್ಧ ರೂ.5000 ದಂಡ ವಿಧಿಸಲು ನಿರ್ಧರಿಸಲಾಗಿದೆ.
ಇದುವರೆಗೆ 2,500 ರೂಪಾಯಿಗಳನ್ನು ದಂಡವಾಗಿ ವಿಧಿಸಲಾಗುತ್ತಿತ್ತು, ಇನ್ನು ಮುಂದೆ ರೂ.5 ಸಾವಿರ ದಂಡವಾಗಿ ವಿಧಿಸಲಾಗುತ್ತಿದೆ.
‘ಎಲ್ಲಾ ಮಾಲೀಕರು ತಮ್ಮ ತಮ್ಮ ಸಾಕು ಪ್ರಾಣಿಗಳನ್ನು ಸರಿಯಾದ ಜಾಗದಲ್ಲಿ ಸಮರ್ಪಕವಾಗಿ ಕಟ್ಟಿ ಹಾಕಿ ಸಾಕಬೇಕು. ರಸ್ತೆಗಳಲ್ಲಿ, ಬೀದಿಗಳಲ್ಲಿ ಅವುಗಳನ್ನು ಬಿಡಬಾರದು. ಒಂದು ವೇಳೆ ಬಿಟ್ಟರೆ ಜಿಲ್ಲಾಡಳಿತ 5 ಸಾವಿರ ರೂಪಾಯಿಗಳ ದಂಡವನ್ನು ವಿಧಿಸುತ್ತದೆ’ ಎಂದು ಪ್ರಕಟನೆಯನ್ನು ಹೊರಡಿಸಲಾಗಿದೆ.
ನೊಯ್ಡಾದಲ್ಲಿ ಕಳೆದ ಆರು ತಿಂಗಳಲ್ಲಿ 4175 ದನಗಳನ್ನು ಹಿಡಿದು ಗೋಶಾಲೆಗಳಿಗೆ ಶಿಫ್ಟ್ ಮಾಡಲಾಗಿದೆ, ಇದರಲ್ಲಿ 75 ಗೋ ಮಾಲೀಕರು ತಮ್ಮ ಹಸುಗಳನ್ನು ಬಿಡಿಸಿಕೊಂಡು ಹೋಗಲು ಬಂದಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಇಲ್ಲಿ 7 ಎಕರೆ ಪ್ರದೇಶದಲ್ಲಿ ಗೋಶಾಲೆ ಇದೆ, ಇಲ್ಲಿ 1,325 ದನಗಳು ಆಶ್ರಯ ಪಡೆದುಕೊಂಡಿವೆ.