ನವದೆಹಲಿ: ರೈತರಿಂದ ಹಿಡಿದು ಸಂಸ್ಕರಣೆ ಮಾಡುವವರವರೆಗೆ ದೇಶದ ಇಡೀ ಕ್ಷೀರ ವಲಯವನ್ನೇ ಸೋಲಾರ್ಗೆ ಪರಿವರ್ತಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ಇದಕ್ಕಾಗಿ ಶೇ.30ರಷ್ಟು ಸಬ್ಸಿಡಿಯನ್ನು ಒದಗಿಸಲು ಮುಂದಾಗಿದೆ. ಈ ಬಗೆಗಿನ ನಿಯಮ ಶೀಘ್ರದಲ್ಲೇ ಘೋಷಣೆಯಾಗಲಿದೆ ಎಂದು ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೊರ್ಡ್ ಮುಖ್ಯಸ್ಥ ದಿಲಿಪ್ ರಥ್ ಹೇಳಿದ್ದಾರೆ.
ದೇಶದ ಹಾಲು ಉದ್ಯಮದ ಬಹುಪಾಲು ಕೋ-ಅಪರೇಟಿವ್ ಬ್ಯುಸಿನೆಸ್ ಮಾಡೆಲ್ನಲ್ಲಿ ನಡೆಯುತ್ತದೆ. ಇದು ಒಗ್ಗೂಡಿತ ಮಾದರಿಯಾಗಿದ್ದು, ಇಲ್ಲಿ ಹಾಲು ಉತ್ಪಾದಕರು ಮತ್ತು ಹಾಲು ಸಂಸ್ಕರಣದಾರರು ಷೇರುದಾರರಾಗಿರುತ್ತಾರೆ. ಇದೀಗ ಉತ್ಪಾದಕರಿಂದ ಹಿಡಿದು ಸಂಸ್ಕರಣದಾರರವರೆಗೂ ಸೋಲಾರ್ಗೆ ಪರಿವರ್ತಿಸುವ ಯೋಜನೆ ಸರ್ಕಾರದ್ದು.
ಮೊದಲ ಹಂತದಲ್ಲಿ, ಎಲೆಕ್ಟ್ರಿಸಿಟಿ ಮತ್ತು ಡಿಸೇಲ್ ಮೂಲದಿಂದ ವಿದ್ಯುತ್ ಬಳಕೆಯನ್ನು ಶೇ.25ರಷ್ಟು ಕಡಿಮೆಗೊಳಿಸುವುದು ಸರ್ಕಾರ ಪ್ಲ್ಯಾನ್ ಆಗಿದೆ. ಸೋಲಾರ್ ಗ್ರಿಡ್ಗಳಿಂದ ಸಿಕ್ಕ ಹೆಚ್ಚುವರಿ ವಿದ್ಯುತ್ನ್ನು ರೈತರು ಸರ್ಕಾರಿ ಮಂಡಳಿಗಳು ನಿಗದಿಪಡಿಸಿದ ದರದಲ್ಲಿ ವಾಪಸ್ ಮಾರಾಟಮಾಡಲು ಅವಕಾಶ ಸಿಗಲಿದೆ. ಸೋಲಾರ್ ವಿದ್ಯುತ್ ಉತ್ಪಾದಿಸಲು ಸರ್ಕಾರ ಇವರಿಗೆ ಶೇ.30ರಷ್ಟು ಸಬ್ಸಿಡಿಯನ್ನು ನೀಡಲಿದೆ.
ಹಾಲನ್ನು ಸಂಗ್ರಹಿಸಿ, ಸಂಸ್ಕರಿಸುವ ಕೋ-ಅಪರೇಟಿವ್ ಸಂಸ್ಥೆಗಳು ಕೂಡ ಸರ್ಕಾರದ ಶೇ.30ರಷ್ಟು ಸಬ್ಸಿಡಿಗೆ ಅರ್ಹರಾಗಿರುತ್ತಾರೆ. ನಿರಂತರ ವಿದ್ಯುತ್ ಕಡಿತದಿಂದ ಹಾಲಿನ ಗುಣಮಟ್ಟ ಹಾಳಾಗುತ್ತದೆ. ಆದರೆ ಇದಕ್ಕೆ ಪರ್ಯಾಯವಾಗಿ ಸೋಲಾರ್ ವಿದ್ಯುತ್ ಬಳಕೆಯಿಂದ ಹಾಲಿನ ಗುಣಮಟ್ಟವೂ ಸುಧಾರಿಸಲಿದೆ.
source: hindusthantimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.