ಹಿಂದೂಗಳು ಮತಾಂಧರು ಎಂದು ಬಿಂಬಿಸಿ ಸಮಾಜದಲ್ಲಿ ಹಿಂದೂ ಫೋಬಿಯಾವನ್ನು ಹರಡಿಸುವ ಕಾರ್ಯವನ್ನು ಕೆಲವು ಮಾಧ್ಯಮಗಳು ವ್ಯವಸ್ಥಿತವಾಗಿ ನಡೆಸುತ್ತಿದೆ. ಅಂತಹವರಲ್ಲಿ ಇಂಡಿಯಾಸ್ಪೆಂಡ್.ಕಾಮ್ ಕೂಡ ಒಂದು.
ಇಂಡಿಯಾಸ್ಪೆಂಡ್ ಇತ್ತೀಚಿಗೆ ಹೊರತಂದಿರುವ ’ಹೇಟ್ ಕ್ರೈಮ್ ಡಾಟಾಬೇಸ್’ ಹಿಂದೂ ಫೋಬಿಯಾದಿಂದ ಕೂಡಿದ್ದು, ಅಪರಾಧಿಗಳ ಮತ್ತು ಸಂತ್ರಸ್ಥರ ಧಾರ್ಮಿಕ ಚಿತ್ರಣವನ್ನು ಪ್ರಮುಖವನ್ನಾಗಿಟ್ಟುಕೊಂಡು ಇದನ್ನು ಸಿದ್ಧಪಡಿಸಲಾಗಿದೆ. ಹಿಂದೂಗಳನ್ನು ಅಪರಾಧಿಗಳಂತೆ ಮತ್ತು ಮುಸ್ಲಿಮರನ್ನು ಸಂತ್ರಸ್ಥರಂತೆ ತೋರಿಸಲಾಗಿದೆ.
2018ರ ನವೆಂಬರ್ನಲ್ಲಿ ಸ್ವರಾಜ್ಯ ಮಾಧ್ಯಮದಲ್ಲಿ ಬಂದ ವರದಿ, ಭಾರತದಲ್ಲಿನ ಅಪರಾಧಗಳ ಬಗ್ಗೆ ಇಂಡಿಯಾಸ್ಪೆಂಡ್ನ ಡಾಟಾಬೇಸ್ ಮುಸ್ಲಿಮರನ್ನು ಬಲಿಪಶುಗಳಂತೆ ಮತ್ತು ಹಿಂದೂಗಳನ್ನು ದುಷ್ಕರ್ಮಿಗಳು ಎಂಬಂತೆ ಬಿಂಬಿಸಲು ಮಾಡಲಾದ ಒಂದು ದೊಡ್ಡ ಷಡ್ಯಂತ್ರ ಎಂಬುದನ್ನು ಬಹಿರಂಗಪಡಿಸಿದೆ.
ನಾವು 2018ರಲ್ಲಿ ಇಂಡಿಯಾಸ್ಪೆಂಡ್ನ ಆರು ತಿಂಗಳ ದತ್ತಾಂಶವನ್ನು ಪರಿಶೀಲನೆ ಮಾಡಿ ನೋಡಿದರೆ, ಹಿಂದೂಗಳು ಸಂತ್ರಸ್ಥರಾಗಿರುವ ಹಲವಾರು ಘಟನೆಗಳನ್ನು ಪೋರ್ಟಲ್ ಕೈಬಿಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇಂತಹ 35 ಪ್ರಕರಣಗಳನ್ನು ಇಂಗ್ಲೀಷ್ ಮಾಧ್ಯಮದಿಂದ ಮತ್ತು 23 ಪ್ರಕರಣಗಳನ್ನು ಹಿಂದಿ ಮಾಧ್ಯಮದಿಂದ ನಾವು ಪಟ್ಟಿ ಮಾಡಿಕೊಂಡಿದ್ದೇವೆ.
ಸ್ವರಾಜ್ಯದ ವರದಿ ಬಹಿರಂಗವಾದ ಬಳಿಕ ಇಂಡಿಯಾಸ್ಪೆಂಡ್ ಮತ್ತು ಅದರ ಫ್ಯಾಕ್ಟ್ ಚೆಕಿಂಗ್ ಅಂಗ ಫ್ಯಾಕ್ಟ್ ಚೆಕರ್ ಟ್ವಿಟ್ ಮಾಡಿ, ’ನಾವು ಉಲ್ಲೇಖಿಸಿದ ಹಲವಾರು ಪ್ರಕರಣಗಳು ತಮ್ಮ ದ್ವೇಷ ಅಪರಾಧದ ವಿವರಣೆಯನ್ನು ಯಾಕೆ ತಲುಪಿಲ್ಲ ಎಂಬುದಕ್ಕೆ ಕಾರಣಗಳ ಪಟ್ಟಿ ನೀಡಿತ್ತು. 35 ಪ್ರಕರಣಗಳ ಪೈಕಿ 9 ಪ್ರಕರಣಗಳು ನಮ್ಮ ವಿವರಣೆಯನ್ನು ಹೊಂದುತ್ತವೆ. ಅವುಗಳನ್ನು ನಾವು ನಮ್ಮ ದತ್ತಾಂಶಕ್ಕೆ ಸೇರ್ಪಡೆಗೊಳಿಸಿದ್ದೇವೆ. ಸ್ವರಾಜ್ಯ ತೋರಿಸಿರುವ ಇನ್ನೊಂದು ಪ್ರಕರಣ ಈಗಾಗಲೇ ಡಾಟಾಬೇಸ್ನಲ್ಲಿ ರೆಕಾರ್ಡ್ ಆಗಿದೆ, ಹೀಗಾಗಿ ಅದನ್ನು ಕೈಬಿಡಲಾಗಿದೆ. 2 ಪ್ರಕರಣಗಳನ್ನು ತಡೆಹಿಡಿಯಲಾಗಿದೆ. ಇನ್ನೊಂದನ್ನು ನಮ್ಮ ಸಲಹೆಗಾರರಿಗೆ ಕಳುಹಿಸಿಕೊಟ್ಟಿದ್ದೇವೆ. ಮತ್ತೆ ಕೆಲವು ಸಂಘರ್ಷಾತ್ಮಕವಾಗಿರುವ ಕಾರಣ ಫ್ಯಾಕ್ಟ್ ಫೈಂಡಿಂಗ್ ಟೀಮ್ಗೆ ಕಳುಹಿಸಿಕೊಟ್ಟಿದ್ದೇವೆ’.
ಅದರ ಕಾರಣಗಳನ್ನು ಪರಿಶೀಲಿಸಿದರೆ, ಮುಸ್ಲಿಂ, ಕ್ರಿಶ್ಚಿಯನ್ ಸಂತ್ರಸ್ಥರಾಗಿರುವ ಪ್ರಕರಣಗಳಿಗೆ ಹೋಲಿಸಿದರೆ ಹಿಂದೂಗಳು ಸಂತ್ರಸ್ಥರಾಗಿರುವ ಪ್ರಕರಣಗಳನ್ನು ಇಂಡಿಯಾಸ್ಪೆಂಡ್ ಹೇಗೆ ತಾರತಮ್ಯದಿಂದ ನೋಡುತ್ತದೆ ಎಂಬ ಆಘಾತಕಾರಿ ಸಂಗತಿ ನಮಗೆ ತಿಳಿದು ಬರುತ್ತದೆ. ಇಂತಹ 10 ಪ್ರಕರಣಗಳನ್ನು ಅವರಿಗೆ ತೋರಿಸಿದಾಗ, ನಮ್ಮ ದ್ವೇಷ ಅಪರಾಧದ ವಿವರಣೆಯನ್ನು ನೀವು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ ಎನ್ನುತ್ತಾರೆ.
ಇಂಡಿಯಾಸ್ಪೆಂಡ್ನ ವಿವರಣೆ ಸ್ಥಿರ ಅಥವಾ ತಾರ್ಕಿಕವಾಗಿ ಇಲ್ಲ. ಸಂತ್ರಸ್ಥರ ಧಾರ್ಮಿಕ ಗುರುತಿಸುವಿಕೆಯನ್ನು ಅವಲಂಬಿಸಿ ಅದನ್ನು ಸಿದ್ಧಪಡಿಸಲಾಗಿದೆ. ಹಿಂದೂಗಳು ಸಂತ್ರಸ್ಥರಾಗಿರುವ ಪ್ರಕರಣವನ್ನು ತನ್ನ ದತ್ತಾಂಶದಿಂದ ಹೊರಗಿಡಲು ಅದು ತನ್ನ ವಿವರಣೆಯನ್ನೇ ತಿರುಚಿದೆ ಎಂಬುದು ನಮ್ಮ ಅಧ್ಯಯನದಿಂದ ತಿಳಿದು ಬಂದಿದೆ.
ಇಂಡಿಯಾಸ್ಪೆಂಡ್ ಮುಸ್ಲಿಮರನ್ನು ಸಂತ್ರಸ್ಥರನ್ನಾಗಿ ತೋರಿಸುವ ಆಯ್ಕೆ ಮಾಡಿಕೊಂಡಿದೆಯೇ ಹೊರತು ಹಿಂದೂ ಸಂತ್ರಸ್ಥರನ್ನಲ್ಲ
ಮೇವತ್ ಪ್ರಕರಣವನ್ನೇ ತೆಗೆದುಕೊಳ್ಳಿ. ಅಲ್ಲಿ ದಲಿತ ವ್ಯಕ್ತಿ ತನ್ನ ಮುಸ್ಲಿಂ ನೆರೆಹೊರೆಯ ವ್ಯಕ್ತಿಯ ಮೇಲೆ ಜಾತಿ ನಿಂದನೆ ಮತ್ತು ಹಲ್ಲೆ ಆರೋಪ ಮಾಡಿದ್ದ. ತನ್ನ ಎಫ್ಐಆರ್ನಲ್ಲೂ ಆತ, ಇಸ್ಲಾಂಗೆ ಮತಾಂತರವಾಗುವಂತೆ ಆ ವ್ಯಕ್ತಿ ನನ್ನನ್ನು ಪೀಡಿಸುತ್ತಿದ್ದಾನೆ ಎಂದು ಆರೋಪಿಸಿದ್ದ. ಹಲವು ಹಿಂದಿ ಮಾಧ್ಯಮಗಳು, ಸ್ವರಾಜ್ಯ, ನ್ಯೂಸ್ಲಾಂಡ್ರಿಯಂತಹ ಇಂಗ್ಲೀಷ್ ಮಾಧ್ಯಮಗಳಲ್ಲೂ ಇದು ಪ್ರಸಾರವಾಗಿತ್ತು.
ಈ ಪ್ರಕರಣವನ್ನು ಇಂಡಿಯಾಸ್ಪೆಂಡ್ಗೆ ತೋರಿಸಿದಾಗ, ’ಈ ಪ್ರಕರಣ ಅಪರಾಧದ ಬಗ್ಗೆ ವಿವಿಧ ಉದ್ದೇಶಗಳನ್ನು ತೋರಿಸುತ್ತಿದೆ. ಒಬ್ಬರು ಇದು ಧಾರ್ಮಿಕ ಆಧಾರದಲ್ಲಿ ನಡೆದ ಅಪರಾಧ ಎಂದರೆ, ಇನ್ನೊಬ್ಬರು ಇದು ವೈಯಕ್ತಿಕ ದ್ವೇಷದಿಂದಾದ ಪ್ರಕರಣ ಎನ್ನುತ್ತಾರೆ. ನಮ್ಮ ಫ್ಯಾಕ್ಟ್ ಫೈಂಡಿಂಗ್ ತಂಡ ಅಲ್ಲಿಗೆ ಹೋಗಿ ಸತ್ಯಾಸತ್ಯತೆ ತಿಳಿಯಲಿದೆ’ ಎಂದಿದೆ.
ಇಲ್ಲಿ ಇಂಡಿಯಾಸ್ಪೆಂಡ್ ಸತ್ಯವನ್ನು ದಾರಿತಪ್ಪಿಸುತ್ತಿದೆ. ಪ್ರಕರಣದ ವರದಿಗಳನ್ನು ಸರಿಯಾಗಿ ಓದಿದರೆ, ಪೊಲೀಸ್ ಅಧಿಕಾರಿಯೊಬ್ಬ ಮಾತ್ರ ಇದು ವೈಯಕ್ತಿಕ ಕಾರಣದಿಂದಾದ ಪ್ರಕರಣ ಎಂದಿದ್ದಾರೆ. ಆದರೆ ಆರೋಪಿಯು ಎಫ್ಐಆರ್ ಮತ್ತು ಮೀಡಿಯಾದ ಮುಂದೆ ಒಂದೇ ರೀತಿಯ ದೃಢವಾದ ಹೇಳಿಕೆಯನ್ನು ನೀಡಿದ್ದಾರೆ.
ಇಲ್ಲಿ ಇಂಡಿಯಾಸ್ಪೆಂಡ್ ಸಂತ್ರಸ್ಥನ ಹೇಳಿಕೆಯನ್ನು ನಂಬಲು ಸಿದ್ಧವಿಲ್ಲ. ಆದರೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಪ್ರಕರಣಗಳಲ್ಲಿ ಅಪರಾಧಿಗಳು ಯಾರೆಂದು ಗೊತ್ತಿಲ್ಲದಿದ್ದರೂ ಸಂತ್ರಸ್ಥರ ಹೇಳಿಕೆಯನ್ನು ನಂಬಿದ್ದಾರೆ.
ಇಂಡಿಯಾಸ್ಪೆಂಡ್ ತನ್ನ ವರದಿಯಲ್ಲಿ ಸೇರಿಸಿರುವ ಈ ಕೆಳಗಿನ ಎರಡು ಪ್ರಕರಣಗಳನ್ನೇ ತೆಗೆದುಕೊಳ್ಳಿ
1. ಎತ್ತುಗಳನ್ನು ಕಳ್ಳಸಾಗಾಣೆ ಮಾಡುತ್ತಿದ್ದ ವ್ಯಕ್ತಿ ತನಗೆ ಗೋರಕ್ಷಕರು ಹೊಡೆದರು ಎಂದು ಪೊಲೀಸರಿಗೆ ಹೇಳಿದ್ದ.
ಈ ಪ್ರಕರಣದಲ್ಲಿ ಇಂಡಿಯಾಸ್ಪೆಂಡ್ ಕಳ್ಳಸಾಗಾಣೆದಾರನ ಹೇಳಿಕೆಯನ್ನು ನಂಬಿದೆ. ಮಾತ್ರವಲ್ಲ ಅಪರಾಧಿಗಳು ಯಾರೆಂದು ಪತ್ತೆಯಾಗಿಲ್ಲದಿದ್ದರೂ, ಹಿಂದೂಗಳು ಅಪರಾಧಿಗಳು ಎಂದು ಹೇಳಿದೆ. ಈ ಬಗ್ಗೆ ಪ್ರಶ್ನಿಸಿದರೆ, ಪ್ರಕರಣವನ್ನು ಗಮನಿಸಿದರೆ ಹಿಂದೂಗಳೇ ಮಾಡಿರುವುದು ಸ್ಪಷ್ಟವಾಗುತ್ತದೆ ಎಂದು ಹೇಳುತ್ತದೆ.
2.ದೆಹಲಿಯಿಂದ ಉತ್ತರಪ್ರದೇಶಕ್ಕೆ ರೈಲಿನಲ್ಲಿ ಆಗಮಿಸುತ್ತಿದ್ದ ವೇಳೆ ರಾತ್ರಿ ನಮ್ಮ ಮೇಲೆ ಹಲ್ಲೆ ನಡೆಯಿತು ಎಂದು ಇಬ್ಬರು ಮೌಲ್ವಿಗಳು ಆರೋಪಿಸಿದ್ದಾರೆ. ಒರ್ವ ನೀವ್ಯಾಕೆ ರುಮಾಲು ಹಾಕಿದ್ದೀರಿ ಎಂದು ಕೇಳಿದ ಎಂದೂ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಮೌಲ್ವಿಯ ಹೇಳಿಕೆಯಷ್ಟೇ ಇಂಡಿಯಾಸ್ಪೆಂಡ್ಗೆ ಸಾಕಾಗಿತ್ತು ಮತ್ತು ಅಪರಾಧಿಗಳು ಪತ್ತೆಯಾಗದಿದ್ದರೂ ತನ್ನದೇ ಅನಿಸಿಕೆಯ ಆಧಾರದಲ್ಲಿ ಅದನ್ನು ತನ್ನ ದ್ವೇಷ ಅಪರಾಧ ಪಟ್ಟಿಗೆ ಸೇರಿಸಿತ್ತು. ದಾಳಿಗೆ ಕೋಮು ಆಯಾಮ ಇರುವುದು ಅನುಮಾನ ಎಂಬ ಪೊಲೀಸರ ಹೇಳಿಕೆಯನ್ನೂ ಅದೂ ನಿರ್ಲಕ್ಷ್ಯಿಸಿದೆ.
ಪೊಲೀಸರು ಕೋಮು ಆಯಾಮವನ್ನು ತಳ್ಳಿ ಹಾಕಿದ ಹಲವಾರು ಪ್ರಕರಣಗಳನ್ನೂ ಇಂಡಿಯಾಸ್ಪೆಂಡ್ ತನ್ನ ಪಟ್ಟಿಗೆ ಸೇರಿಸಿದೆ. ಸಂತ್ರಸ್ಥರ ಹೇಳಿಕೆ ಮತ್ತು ಧಾರ್ಮಿಕ ಗುರುತಿಸುವಿಕೆ ಅದಕ್ಕೆ ಇಲ್ಲಿ ಮುಖ್ಯವಾಗಿದೆ.
ಅಪರಾಧಿ ಮುಸ್ಲಿಂ ಆಗಿದ್ದರೆ ಆತನ ಗುರುತಿಸುವಿಕೆಯನ್ನೇ ಬಚ್ಚಿಡುತ್ತದೆ ಇಂಡಿಯಾಸ್ಪೆಂಡ್
ಮುಸ್ಲಿಮರು ಅಪರಾಧಿಗಳಾಗಿರುವ ಪ್ರಕರಣಗಳಲ್ಲಿ ಅಪರಾಧಿಗಳ ಗುರುತನ್ನು ಇಂಡಿಯಾಸ್ಪೆಂಡ್ ಮುಚ್ಚಿಡುತ್ತದೆ. ಆಗಸ್ಟ್ನಲ್ಲಿ ಕನ್ವರಿಯಗಳು ಟೋನ್ಕ್ ಜಿಲ್ಲೆಯ ಮಲ್ಪುರದಲ್ಲಿ ಮಸೀದಿ ಸಮೀಪ ಹಾದು ಹೋಗುತ್ತಿರುವ ವೇಳೆ ಕಲ್ಲು ತೂರಾಟ ನಡೆಯಿತು. ಟೈಮ್ಸ್ ಆಫ್ ಇಂಡಿಯಾ ‘ಕನ್ವರಿಯಾಗಳ ಮೇಲೆ ದುಷ್ಕರ್ಮಿಗಳಿಂದ ಕಲ್ಲುತೂರಾಟ ಎಂದು ವರದಿ ಮಾಡಿತ್ತು. ಪಿಟಿಐ ಕೂಡ, ಕನ್ವರಿಯಾಗಳ ಮೇಲೆ ಅಲ್ಲಸಂಖ್ಯಾತರಿಂದ ಕಲ್ಲು ತೂರಾಟ, 15 ಮಂದಿಗೆ ಗಾಯ ಎಂದು ವರದಿ ಮಾಡಿತ್ತು.
ಇಲ್ಲಿ ಅಪರಾಧಿಗಳ ಗುರುತನ್ನು ಮುಚ್ಚಿಡುವ ಪ್ರಯತ್ನವನ್ನು ಮಾಡಲಾಗಿದೆಯಾದರೂ, ಅಪರಾಧಿಗಳು ಮುಸ್ಲಿಮರು ಎಂಬುದರಲ್ಲಿ ಯಾವುದೇ ಅನುಮಾನವಿರಲಿಲ್ಲ. ಆದರೆ ಇಂಡಿಯಾಸ್ಪೆಂಡ್ ಈ ಪ್ರಕರಣದಲ್ಲಿ ಆರೋಪಿಗಳ ಗುರುತು ಸಿಕ್ಕಿಲ್ಲ ಎಂದಿದ್ದು ಮಾತ್ರವಲ್ಲ, ಈ ಪ್ರಕರಣವನ್ನು ತನ್ನ ಡಾಟಾಬೇಸ್ನಲ್ಲಿ ಸೇರ್ಪಡೆಗೊಳಿಸಲು ನಿರಾಕರಿಸಿತು ಕೂಡ.
ಹಿಂದೂಗಳ ಬಗೆಗಿನ ತಾರತಮ್ಯದ ಭಾವನೆಯಿಂದ ಕನ್ವರಿಯಾ ಪ್ರಕರಣದಲ್ಲಿ ಧಾರ್ಮಿಕ ದ್ವೇಷವನ್ನು ನೋಡಲು ಇಂಡಿಯಾಸ್ಪೆಂಡ್ಗೆ ಸಾಧ್ಯವಾಗಿಲ್ಲ. ಇದರಿಂದಲೇ ಅದರ ದ್ವೇಷ ಅಪರಾಧದ ವಿವರಣೆ ಸ್ಥಿರವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಲೌಡ್ ಮ್ಯೂಸಿಕ್ನ್ನು ವಿರೋಧಿಸಿ ಮುಸ್ಲಿಂ ವ್ಯಕ್ತಿಯ ಮೇಲೆ ಹಿಂದೂಗಳ ಗುಂಪು ಹಲ್ಲೆ ಮಾಡಿದ ಪ್ರಕರಣನ್ನು ಇಂಡಿಯಾಸ್ಪೆಂಡ್ ದ್ವೇಷ ಅಪರಾಧ ಎಂದು ಪರಿಗಣಿಸಿದೆ. ಆದರೆ ಹಿಂದೂ ವ್ಯಕ್ತಿ ಲೌಡ್ ಮ್ಯೂಸಿಕ್ ವಿರೋಧಿಸಿ ಮುಸ್ಲಿಮರಿಂದ ಕೊಲೆಯಾದುದನ್ನು ಇದು ದ್ವೇಷ ಪ್ರಕರಣ ಎಂದು ಪರಿಗಣಿಸಿಲ್ಲ.
ಮುಸ್ಲಿಮರ ಧಾರ್ಮಿಕ ದ್ವೇಷ ಮತ್ತು ಉಗ್ರವಾದವನ್ನು ನಿರ್ಲಕ್ಷ್ಯಿಸುತ್ತದೆ ಇಂಡಿಯಾಸ್ಪೆಂಡ್
ಕನ್ವರ್ ಯಾತ್ರಾದಲ್ಲಿ ಭಾಗಿಯಾಗಿದ್ದ ಮುಸ್ಲಿಂ ವ್ಯಕ್ತಿ ಬಾಬು ಖಾನ್ ಮೇಲೆ ಮುಸ್ಲಿಮರು ನಡೆಸಿದ ಹಲ್ಲೆಯನ್ನು ಇಂಡಿಯಾಸ್ಪೆಂಡ್ ನಿರ್ಲಕ್ಷ್ಯಿಸಿದೆ. ಈ ಪ್ರಕರಣದಲ್ಲಿ ಸಂತ್ರಸ್ಥರು ಮತ್ತು ಅಪರಾಧಿಗಳಿಬ್ಬರೂ ಒಂದೇ ಧರ್ಮದವರು ಎಂಬುದು ಅದರ ವಾದ. ಆದರೆ ಮತಾಂತರಗೊಂಡ ಎಂಬ ಕಾರಣಕ್ಕೆ ಹಿಂದೂ ವ್ಯಕ್ತಿ ಮೇಲೆ ಹಿಂದೂಗಳು ನಡೆಸಿದ ಹಲ್ಲೆಯನ್ನು ಧಾರ್ಮಿಕ ದ್ವೇಷ ಎಂದ ಅದು ಪರಿಗಣಿಸಿದೆ.
ಕೇವಲ ಹಿಂದೂಗಳ ನಡೆಸುವ ಅಪರಾಧಗಳನ್ನು ಮಾತ್ರ ಇಂಡಿಯಾಸ್ಪೆಂಡ್ ಧಾರ್ಮಿಕ ದ್ವೇಷದ ಪ್ರಕರಣ ಎಂದು ಪರಿಗಣಿಸುತ್ತದೆ. ಪ್ರಕರಣವನ್ನೇ ತಿರುಚಿ ಹಿಂದೂಗಳು ಧಾರ್ಮಿಕ ಮತಾಂಧರು ಎಂಬಂತೆ ಬಿಂಬಿಸುತ್ತದೆ. ಆದರೆ ಮುಸ್ಲಿಮರು ಅಪರಾಧಿಗಳಾಗಿರುವ ಪ್ರಕರಣದಲ್ಲಿ ಅಪರಾಧಿಗಳ ಗುರುತನ್ನೇ ಮುಚ್ಚಿಡುವ ಪ್ರಯತ್ನ ಮಾಡಿ, ಅಪರಿಚಿತರ ದಾಳಿ ಎಂಬಂತೆ ಕಥೆ ಕಟ್ಟುತ್ತದೆ.
ಹಿಂದೂಫೋಬಿಯಾವನ್ನು ಹರಡಿಸುವುದು ಮತ್ತು ಮುಸ್ಲಿಮರನ್ನು ಸಂತ್ರಸ್ಥರನ್ನಾಗಿಸುವ ಉದ್ದೇಶದಿಂದಲೇ ಇಂಡಿಯಾಸ್ಪೆಂಡ್ ಹೇಟ್ಕ್ರೈಮ್ ಡಾಟಾಬೇಸ್ ಅನಾಲಿಸಿಸನ್ನು ಬಿಡುಗಡೆಗೊಳಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಹಿಂದೂಫೋಬಿಯಾ ಹರಡಿಸುವ ಹಿಂದೆಯೂ ರಾಜಕೀಯ ಅಜೆಂಡಾ ಇರಬಹುದಲ್ಲವೇ?
ಮೂಲ ಲೇಖನ: ಸ್ವಾತಿ ಗೋಯಲ್ ಶರ್ಮಾ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.