ನವದೆಹಲಿ: ಸರ್ಕಾರಿ ಸ್ವಾಮ್ಯದ ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್(ಎಚ್ಎಎಲ್)ಗೆ ರೂ.1 ಲಕ್ಷ ಕೋಟಿಯ ಗುತ್ತಿಗೆಯನ್ನು ನೀಡಿರುವ ಬಗ್ಗೆ ತಾನು ಸುಳ್ಳು ಹೇಳುತ್ತಿದ್ದೇನೆ ಎಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ಅವರು, ‘ಕಾಂಗ್ರೆಸ್ ಅಧ್ಯಕ್ಷರು ಸುಳ್ಳುಗಳ ಮೂಲಕ ದೇಶವನ್ನು ತಪ್ಪು ದಾರಿಗಿಳಿಸಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ವಿಷಯವಾಗಿದೆ’ ಎಂದಿದ್ದಾರೆ. ಅಲ್ಲದೇ, 2014ರಿಂದ ಬಿಜೆಪಿ ಅಧಿಕಾರವಧಿಯಲ್ಲಿ ಎಚ್ಎಎಲ್ಗೆ ನೀಡಿದ ಗುತ್ತಿಗೆಗಳ ವಿವರಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
‘ಎಚ್ಎಲ್ 2014ರಿಂದ 2018ರ ನಡುವೆ ರೂ.26570.8 ಕೋಟಿ ಗುತ್ತಿಗೆಗಳಿಗೆ ಸಹಿ ಹಾಕಿದೆ ಮತ್ತು ರೂ.73000 ಕೋಟಿ ಪೈಪ್ಲೈನ್ ಗುತ್ತಿಗೆಗಳಿಗೆ ಸಹಿ ಹಾಕಿದೆ’ ಎಂದು ಸಂಪೂರ್ಣ ದಾಖಲೆಗಳುಳ್ಳ ಪೋಸ್ಟ್ನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, ಈಗಲಾದರೂ ರಾಹುಲ್ ಸಂಸತ್ತಿನಲ್ಲಿ ನಿಂತು ದೇಶದ ಕ್ಷಮೆ ಕೇಳುವರೇ? ಎಂದು ಪ್ರಶ್ನಿಸಿದ್ದಾರೆ.
ಎಚ್ಎಎಲ್ಗೆ ನೀಡಿದ ಗುತ್ತಿಗೆ ಬಗ್ಗೆ ಸೀತಾರಾಮನ್ ಅವರು ಸುಳ್ಳು ಹೇಳಿದ್ದಾರೆ. ಒಂದಾ ಅವರು ದಾಖಲೆಯನ್ನು ನೀಡಬೇಕು, ಇಲ್ಲವೇ ರಾಜೀನಾಮೆಯನ್ನು ನೀಡಬೇಕು ಎಂದು ರಾಹುಲ್ ಹೇಳಿದ್ದರು.
It’s a shame that the president of @INCIndia is misleading the nation.
HAL has signed contracts worth Rs 26570.8 Cr (Between 2014 and 2018) and contracts worth Rs 73000 Cr are in the pipeline.
Will @RahulGandhi apologise to the country from the floor of the house? pic.twitter.com/KIQsWikByG
— Raksha Mantri (@DefenceMinIndia) January 6, 2019
sources: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.