ನವದೆಹಲಿ: ಭಾನುವಾರ ದೇಶದಾದ್ಯಂತ ವಿಶ್ವ ಯೋಗದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ, ನೆಲದಲ್ಲಿ ಮಾತ್ರವಲ್ಲದೇ ಆಗಸದಲ್ಲೂ ಯೋಗವನ್ನು ಮಾಡಿ ದಾಖಲೆಯನ್ನು ಮಾಡಲಾಗಿದೆ.
ಗುವಾಹಟಿ-ದೆಹಲಿ ವಿಮಾನದಲ್ಲಿನ ಎಲ್ಲಾ ಸಿಬ್ಬಂದಿಗಳು, 180 ಪ್ರಯಾಣಿಕರು ಸಾಗರದಿಂದ 35,000 ಫೀಟ್ ಎತ್ತರದಲ್ಲಿ ಯೋಗಾಸನ ಮಾಡಿ ದಾಖಲೆ ಬರೆದಿದ್ದಾರೆ. ಇಷ್ಟು ಎತ್ತರದಲ್ಲಿ ಯೋಗಾಸನಗಳನ್ನು ಮಾಡಿರುವುದು ಇತಿಹಾಸದಲ್ಲಿ ಇದೇ ಮೊದಲು.
ಸದ್ಗುರುವಿನ ಇಶಾ ಫೌಂಡೇಶನ್ ಈ ವಿನೂತನ ಪ್ರಯೋಗವನ್ನು ಹಾರುವ ವಿಮಾನದಲ್ಲಿ ಮಾಡಿದೆ. ಉಪಯೋಗದಂತಹ ಸರಳ ಆಸನಗಳನ್ನು ಹಾರುವ ವಿಮಾನದಲ್ಲಿ ಸಿಬ್ಬಂದಿಗಳು, ಪ್ರಯಾಣಿಕರು ಮಾಡಿದ್ದಾರೆ. ಇದೊಂದು ಅತಿ ಸರಳ ಯೋಗಾಸನವಾಗಿದ್ದು, ಯಾರುಬೇಕಾದರೂ, ಎಲ್ಲಿ ಬೇಕಾದರೂ ಮಾಡಬಹುದಾಗಿದೆ ಎನ್ನುತ್ತಾರೆ ಇಶಾ ಫೌಂಡೇಶನ್ ಯೋಗ ಟೀಚರ್ ಗೀತಾ.
ಉದ್ಯಮ, ಸಭೆ, ಸಮಾರಂಭ ಮುಂತಾದ ಹಲವು ಕಾರ್ಯಗಳಿಗಾಗಿ ಜನ ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಎಲ್ಲರಲ್ಲೂ ಒಂದೊಂದು ತರನಾದ ಒತ್ತಡಗಳಿರುತ್ತವೆ. ಹೀಗಾಗಿ ಇಂತಹ ಸರಳ ಯೋಗಾಸನಗಳನ್ನು ವಿಮಾನದಲ್ಲೇ ಮಾಡುವುದು ಮನಸ್ಸಿಗೆ ಮತ್ತು ದೇಹಕ್ಕೆ ಉಲ್ಲಾಸವನ್ನು ನೀಡುತ್ತದೆ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಪುರಾತನ ವಿದ್ಯೆ ಯೋಗ ಇಂದು ಮುಗಿಲೆತ್ತರಕ್ಕೆ ಪಸರಿದೆ ಎಂಬುದಕ್ಕೆ ಇದುವೇ ಸಾಕ್ಷಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.