ನವದೆಹಲಿ: ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು ಇಟ್ಟಿರುವ ಠೇವಣಿಗಳ ಬಗೆಗಿನ ಮಾಹಿತಿಯನ್ನು ಈ ವರ್ಷ ಸ್ವಿಟ್ಜರ್ಲ್ಯಾಂಡ್ನಿಂದ ಭಾರತ ಪಡೆದುಕೊಳ್ಳಲಿದೆ ಎಂದು ಸರ್ಕಾರ ತಿಳಿಸಿದೆ.
ಲೋಕಸಭಾದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿರುವ ಕೇಂದ್ರ ರಾಜ್ಯ ಖಾತೆ ವಿದೇಶಾಂಗ ಸಚಿವೆ ವಿಕೆ ಸಿಂಗ್ ಅವರು, ಸ್ವಿಟ್ಜರ್ಲ್ಯಾಂಡಿನಿಂದ ಈ ವರ್ಷ ಭಾರತಕ್ಕೆ ಲಭ್ಯವಾಗುವ ಮಾಹಿತಿಗಳಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದವರ ವಿವರಗಳೂ ಇರಬಹುದು ಎಂದಿದ್ದಾರೆ.
ಭಾರತ-ಸ್ವಿಟ್ಜರ್ಲ್ಯಾಂಡ್ ತೆರಿಗೆ ಒಪ್ಪಂದದ ಅನ್ವಯ, ಪ್ರಕರಣದ ತನಿಖೆಯಡಿ ಮನವಿಯ ಆಧಾರದಲ್ಲಿ ಮಾಹಿತಿಯನ್ನು ಸ್ವೀಕರಿಸಬಹುದಾಗಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾದ ವ್ಯಕ್ತಿಯ ವಿವರಗಳನ್ನು ಈ ಮಾಹಿತಿ ಒಳಗೊಳ್ಳಲಿದೆ ಎಂದಿದ್ದಾರೆ.
ಅಕ್ರಮ ಆಸ್ತಿಗಳ ರಕ್ಷಣೆಗೆ ಸ್ವಿಟ್ಜರ್ಲ್ಯಾಂಡ್ ಸುರಕ್ಷಿತ ಸ್ವರ್ಗವಾಗಿದ್ದು, ಹಲವಾರು ಭಾರತೀಯರ ಹಣ ಇಲ್ಲಿದೆ ಎಂದು ಹೇಳಲಾಗಿದೆ.
source: ndtv
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.