ಭಗವಾನ್ ಶ್ರೀರಾಮನ ಅಸ್ತಿತ್ವದ ಪ್ರತೀಕ ರಾಮಸೇತು. ಶ್ರೀರಾಮನ ಸೇನೆಯೇ ಈ ಸೇತುವನ್ನು ನಿರ್ಮಾಣ ಮಾಡಿದೆ ಎಂಬುದು ಅಪಾರ ಹಿಂದೂಗಳ ದೃಢ ನಂಬಿಕೆ. ಇದು ಸುಮಾರು 1750000 ವರ್ಷ ಹಳೆಯದು ಎಂಬುದಾಗಿ ನಾಸಾ ಕೂಡ ಒಪ್ಪಿಕೊಂಡಿದೆ. ಆ ಕಾಲದಲ್ಲಿ ಶ್ರೀಲಂಕಾದಲ್ಲಿ ಮನುಷ್ಯರು ಜೀವಿಸುತ್ತಿದ್ದರು ಎಂಬುದು ಕೂಡ ಅಧ್ಯಯನದಿಂದ ದೃಢಪಟ್ಟಿದೆ. 300 ವರ್ಷಗಳ ಹಿಂದೆ ಜನರು ಈ ಸೇತುವಿನ ಬಳಕೆಯನ್ನು ಮಾಡುತ್ತಿದ್ದರು ಮತ್ತು ಈ ಸೇತುವೆ ಶ್ರೀಲಂಕಾ-ಭಾರತದ ಜನರ ನಡುವಿನ ಕೊಂಡಿಯಂತಿತ್ತು ಎಂಬುದಕ್ಕೆ ಹಲವಾರು ಉಲ್ಲೇಖಗಳಿವೆ.
ಪತ್ನಿ ವಿಯೋಗದಿಂದ ಜರ್ಜರಿತನಾಗಿ, ಆಕೆಯನ್ನು ಹುಡುಕುತ್ತಾ ಸಹೋದರನೊಂದಿಗೆ ಶ್ರೀಲಂಕಾದತ್ತ ಹೊರಟಿದ್ದ ಶ್ರೀರಾಮನಿಗೆ ದಾರಿಯುದ್ದಕ್ಕೂ ಭಕ್ತ ಸಾಗರವೇ ಹುಟ್ಟಿಕೊಂಡಿತು, ವಾನರರು, ಅಳಿಲುಗಳೂ ಆತನ ಭಕ್ತಿಯಲ್ಲಿ ಮುಳುಗಿದ್ದವು. ಈ ಭಕ್ತರು ತಮ್ಮ ಭಕ್ತಿಯ ಸಂಕೇತವಾಗಿ ರಾಮನಿಗೆ ಈ ಸೇತುವನ್ನು ಅವರು ನಿರ್ಮಾಣ ಮಾಡಿದರು ಎಂಬುದು ಸತ್ಯ. ಸಿತೆಯನ್ನು ಮತ್ತೆ ಸೇರಲು ಆತನಿಗೆ ಈ ಸೇತುವೆಯ ಅನಿವಾರ್ಯತೆಯೂ ಇತ್ತು. ಪಿತೃವಾಕ್ಯ ಪರಿಪಾಲನೆಗಾಗಿ ಸಾಮ್ರಾಜ್ಯವನ್ನು ತೊರೆದು ವನವಾಸದಲ್ಲಿದ್ದ ರಾಮ ತನ್ನ ದೈವೀ ಶಕ್ತಿಗಳನ್ನು ಎಂದಿಗೂ ಪ್ರಚಾರ ಮಾಡಿದವನಲ್ಲ. ಆದರೂ ಆತನ ದಿವ್ಯ ಸ್ವರೂಪವನ್ನು ಕಂಡು ಜನರೇ ಆತನನ್ನು ಅನುಸರಿಸುತ್ತಿದ್ದರು. ಭಕ್ತಿ ಪ್ರದರ್ಶಿಸುತ್ತಿದ್ದರು. ರಾಮಭಕ್ತಿಯಿಂದ ಪರವಶರಾಗಿ ರಾಮಸೇತುವನ್ನೇ ಜನರು ನಿರ್ಮಾಣ ಮಾಡಿದರು. ಇಂತಹ ರಾಮಸೇತುವನ್ನು ಪ್ರಶ್ನಿಸುವುದೆಂದರೇ ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದಂತೆ. ರಾಮ ಭಕ್ತರನ್ನು ಅವಮಾನಿಸಿದಂತೆ, ಇದನ್ನು ಅರ್ಥಮಾಡಿಕೊಂಡಿದ್ದ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ, ಶ್ರೀರಾಮಾಯಣ ಕೇವಲ ಒಂದು ಸಾಹಿತ್ಯ ಮಾತ್ರ, ಶ್ರೀಲಂಕಾ-ಭಾರತದ ಮಧ್ಯೆ ಯಾವುದೇ ಮಾನವ ನಿರ್ಮಿತ ಸೇತುವೆಗಳಿಲ್ಲ ಎಂದು ವಾದಿಸಿದ್ದು! ಭಾರತದ ಪಾಲಿಗೆ ಇದಕ್ಕಿಂತ ದುರಾದೃಷ್ಟ ಮತ್ತೊಂದಿಲ್ಲ! ಆದರೆ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ಸಿಗರು ರಾಮ ಭಕ್ತರಂತೆ ಸೋಗು ಹಾಕಿಕೊಳ್ಳುತ್ತಿರುವುದು ದುರಂತವೇ ಸರಿ.
13-16ನೇ ಶತಮಾನದಲ್ಲಿ ರಾಜ್ಯಭಾರ ಮಾಡಿದ್ದ ಜಾಫ್ನಾದ ರಾಜರುಗಳು ತಮ್ಮನ್ನು ತಾವು ಸೇತು ಕಾವಲುಗಾರರು, ರಾಮೇಶ್ವರಂ ಮತ್ತು ಅದರ ಸುತ್ತಲ ಸಮುದ್ರ ಪ್ರದೇಶದ ಸಂರಕ್ಷರು ಎಂದೇ ಕರೆಯುತ್ತಿದ್ದರು. ದಕ್ಷಿಣ ಭಾರತದಲ್ಲೂ ಶ್ರೀರಾಮನನ್ನು ಕೋದಂಡ ರಾಮ, ಧನುಷ್ಧಾರಿ ರಾಮ ಎಂದೇ ಆದರಿಸುತ್ತಾರೆ. ರಾಮನೆಂದರೆ ಯುದ್ಧದಲ್ಲಿ ಶತ್ರುಗಳನ್ನು ಸಂಹಾರ ಮಾಡಿದವ ಎಂಬುದು ಅವರ ನಂಬಿಕೆ.
ವಿದೇಶಿಗರನ್ನು ಕೂಡ ಈ ರಾಮಸೇತು ಅತ್ಯಂತ ಆಕರ್ಷಿತಗೊಳಿಸಿತ್ತು. 11ನೇ ಶತಮಾನದಲ್ಲಿ ಅಲ್ ಬರೂನಿ ಎಂಬಾತ ‘ಸೇತುಬಂಧದ ಅರ್ಥವೇ ಮಹಾಸಮುದ್ರದ ಮೇಲೆ ನಿರ್ಮಿತವಾದ ಸೇತುವೆ. ಈ ಸೇತುವೆ ದಶರಥ ಪುತ್ರ ರಾಮನ ಸೇತುವೆ. ಇದನ್ನು ಮಹಾದ್ವೀಪದಿಂದ ಲಂಕಾದ ಮಹಲಿನವರೆಗೆ ನಿರ್ಮಾಣ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇಲ್ಲಿ ವಿವಿಧ ಮರಗಳ ಶೃಂಕಾಲಯ ನಿರ್ಮಾಣವಾಗಲಿದೆ, ಇದರ ನಡುವೆ ಸಮುದ್ರದ ಅಲೆ ತೇಲಲಿದೆ’ ಎಂದಿದ್ದ. 13ನೇ ಶತಮಾನದಲ್ಲಿ ಬಂದಿದ್ದ ವ್ಯಾಪಾರಿ ಮಾರ್ಕೋ ಪೋಲೋ ಎಂಬಾತ ಕೂಡ, ರಾಮನಿಗೆ ಸಂಬಂಧಿಸಿದ ಸೇತುಬಂಧ ರಾಮೇಶ್ವರಂ ಬಗ್ಗೆ ಉಲ್ಲೇಖ ಮಾಡಿದ್ದಾನೆ.
ನೂರಾರು ವರ್ಷಗಳ ಹಿಂದೆ ಯುರೋಪ್‌ನಿಂದ ಬಂದ ಆರಂಭಿಕ ಪ್ರವಾಸಿಗರು ಕೂಡ, ಈ ರಾಮಸೇತುವನ್ನು ಶ್ರೀಲಂಕಾದವರೆಗಿನ ಜನರು ಸೇತುವೆಯಾಗಿ ಬಳಸುತ್ತಿದ್ದನ್ನು ಕಂಡಿದ್ದಾರೆ. 1893ರ ಮದ್ರಾಸ್ ಪ್ರೆಸಿಡೆನ್ಸಿಯ ವೇಳೆ ನಮೋದಿಸಲಾದ ದೇಗುಲದ ದಾಖಲೆ ಮತ್ತು ಯಾತ್ರಿಗಳ ವಿವರದಲ್ಲೂ ‘1799ರವರೆಗೆ ರಾಮಸೇತು ಕಾರ್ಯಾಚರಣೆಯಲ್ಲಿತ್ತು, ಆದರೆ ಬಳಿಕ ಸಮುದ್ರದ ಸ್ವರೂಪದಲ್ಲಿ ಉಂಟಾದ ಬದಲಾವಣೆಗಳಿಂದಾಗಿ ಈ ಸೇತುವೆಯ ಬಳಕೆ ಅಸಾಧ್ಯವಾಯಿತು’ ಎಂಬ ಮಾಹಿತಿಯಿದೆ.
ದೇವನಾಗರಿ ಲಿಪಿಯ ಪ್ರಭಾವ ಚೀನಾದಿಂದ ಹಿಡಿದು ರಾಮಸೇತುವಿನವರೆಗೂ ಇತ್ತು ಎಂಬುದಾಗಿ 18ನೇ ಶತಮಾನದಲ್ಲಿ ಸರ್ ವಿಲಿಯಂ ಜೋನ್ಸ್ ಅಧ್ಯಯನ ಮಾಡಿದ್ದಾರೆ, ರಾಮ ರಾವಣನ ಕಪಿಮುಷ್ಟಿಯಿಂದ ಸೀತೆಯನ್ನು ಬಿಡಿಸುವ ಸಂದರ್ಭವನ್ನು ಉಲ್ಲೇಖಿಸಿರುವ ಅವರು, ’ರಾಮ ಸಮುದ್ರವನ್ನು ಹಾದು ಹೋಗಲು ತ್ವರಿತವಾಗಿ ಬಂಡೆಗಳಿಂದ ಒಂದು ಸೇತುವೆಯನ್ನು ನಿರ್ಮಾಣ ಮಾಡಿದ, ಅದು ಈಗಲೂ ಅಲ್ಲಿದೆ ಎಂಬುದು ಹಿಂದೂಗಳ ನಂಬಿಕೆ. ಬಹುಶಃ ಇದು ಪೋರ್ಚುಗೀಸರು ಮತ್ತು ಮೊಘಲರು ಆಡಂ ಬ್ರಿಡ್ಜ್ ಎಂದು ಅಸಂಬದ್ಧವಾಗಿ ಕರೆಯುವ ಸೇತುವೆ ಆಗಿರಬಹುದು’ ಎಂದಿದ್ದ.
ವಿಶೇಷವೆಂದರೆ, ಮಗಧ ಸಾಮ್ರಾಜ್ಯದ ದೊರೆ ಚಕ್ರವರ್ತಿ ಅಶೋಕನ ಪುತ್ರ ಮಹೇಂದ್ರ ಮತ್ತು ಪುತ್ರಿ ಸಂಘಮಿತ್ರ ರಾಮಸೇತುವೆಯ ಮೂಲಕವೇ ಶ್ರೀಲಂಕಾಗೆ ಆಗಮಿಸಿದ್ದರು ಎಂಬುದು ಸಿಂಹಳೀಯರ ಅಚಲವಾದ ನಂಬಿಕೆಯಾಗಿದೆ.
ನಾಸಾದ ಉಪಗ್ರಹದಿಂದ ತೆಗೆದ ಛಾಯಾಚಿತ್ರಗಳು ಕೂಡ, ಸಮುದ್ರದೊಳಗೆ ವಿವಿಧ ಗೋಳಾಕಾರದ ರಚನೆಗಳನ್ನು ಹೊಂದಿರುವ 1750000 ವರ್ಷ ಹಳೆಯದಾದ ಮುರಿದ ಸೇತುವೆಯನ್ನು ತೋರಿಸುತ್ತವೆ. ನೈಸರ್ಗಿಕವಲ್ಲದ ವಸ್ತುಗಳಿಂದ ಈ ಸೇತುವೆ ರಚಿಸಲ್ಪಟ್ಟಿದೆ ಎಂಬುದನ್ನು ಇದು ಸೂಚಿಸುತ್ತದೆ. ಪುರಾತತ್ತ್ವ ಶಾಸ್ತ್ರದ ಅಧ್ಯಯನವೊಂದು, ಶ್ರೀಲಂಕಾದಲ್ಲಿ ಸುಮಾರು 1750000 ವರ್ಷಗಳ ಹಿಂದೆ ಮಾನವರು ಸಂಕೇತಗಳನ್ನು ಭಾಷೆಯಾಗಿ ಬಳಸುತ್ತಿದ್ದರು ಮತ್ತು ಈ ಸೇತುವೆ ಕೂಡ ಆ ಕಾಲಘಟ್ಟದ್ದೇ ಆಗಿರಬಹುದು ಎಂದು ತಿಳಿಸಿದೆ. 2012 ರ ಮಾರ್ಚ್ನಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು, ಸೇತುವೆ ಅದ್ಭುತ ಐತಿಹಾಸಿಕ, ಪುರಾತತ್ವ, ಪಾರಂಪರಿಕ ಮೌಲ್ಯವನ್ನು ಹೊಂದಿದ್ದು, ಅದನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ರಾಮಾಯಣದ ಯುದ್ಧಕಾಂಡದ 85 ಶ್ಲೋಕಗಳಲ್ಲಿ ಸೇತುಬಂಧ ನಿರ್ಮಾಣವನ್ನು ವಿವರಿಸಲಾಗಿದೆ. ಇದಲ್ಲದೇ, ಶ್ರೀರಾಮನ ಆದೇಶದಂತೆ ನಳ ಸೇತು (ವಿಶ್ವಕರ್ಮರ ಪುತ್ರ ನಳನಿಂದ ನಿರ್ಮಿತಗೊಂಡ ಸೇತುವೆ)ಯನ್ನು ಸದಾ ಸಂರಕ್ಷಣೆಯಲ್ಲಿಟ್ಟ ಬಗ್ಗೆ ಉಲ್ಲೇಖ ಮಹಾಭಾರತದಲ್ಲಿದೆ. ರಾಮ ಸೇತುವೆ ನಾಶವಾದ ಬಗ್ಗೆ ಯಾವುದೇ ಐತಿಹಾಸಿಕ ಸಂದರ್ಭಗಳ ಉಲ್ಲೇಖವಿಲ್ಲ. ಆದರೆ ಈ ಸೇತುವೆಯನ್ನು ಧ್ವಂಸ ಮಾಡಲು ಯುಪಿಎ ಸರ್ಕಾರದ ಶಿಪ್ಪಿಂಗ್ ಮತ್ತು ಸಾರಿಗೆ ಸಚಿವ, ಡಿಎಂಕೆ ನಾಯಕ ಸರ್ಕಾರದ ಅಣತಿಯ ಮೇರೆಗೆ ಸುಪ್ರೀಂಕೋರ್ಟ್ ಮುಂದೆ ಅಫಿಡವಿಟ್ ಪ್ರಸ್ತುತಪಡಿಸಿದನ್ನು ರಾಮಸೇತುವಿನ ಧ್ವಂಸಕ್ಕೆ ನಡೆಸಿದ ಪಿತೂರಿ ಎಂದು ಉಲ್ಲೇಖಿಸಬಹದು. ಕಾಳಿದಾಸನ ರಘುವಂಶದಲ್ಲಿ ಸೇತವಿನ ಉಲ್ಲೇಖಿವಿದೆ. ಸ್ಕಂದ ಪುರಾಣ, ವಿಷ್ಣು ಪುರಾಣ, ಅಗ್ನಿ ಪುರಾಣ ಮತ್ತು ಬ್ರಹ್ಮ ಪುರಾಣ ಕೂಡ ರಾಮಸೇತು ನಿರ್ಮಾಣದ ಬಗ್ಗೆ ಉಲ್ಲೇಖಿಸುತ್ತವೆ.
ಭಾರತ ಮತ್ತು ಶ್ರೀಲಂಕಾದ ಜನರ ನಡುವೆ ಇಂದು ಒಂದು ಅನನ್ಯವಾದ ಸಾಂಸ್ಕೃತಿಕ ಕೊಂಡಿಯಿದೆ. ಸಾಂಸ್ಕೃತಿಕವಾದ, ಧಾರ್ಮಿಕವಾದ ಈ ಕೊಂಡಿಗೆ ಭದ್ರ ಅಡಿಪಾಯವನ್ನು ಹಾಕಿಕೊಟ್ಟದ್ದು ರಾಮಸೇತು ಎಂದರೆ ತಪ್ಪಾಗಲಾರದು. ರಾಮನ ಅಸ್ತಿತ್ವದ ಸಂಕೇತವಾದ ಈ ಸೇತುವೆಗೆ ಮೂಢರ ಕರಿನೆರಳು ಬೀಳದಂತೆ ಜತನ ಮಾಡುವ ಜವಾಬ್ದಾರಿ ರಾಮನ ಭಕ್ತರಾದ ಎಲ್ಲರದ್ದೂ ಆಗಿದೆ.
ಮೂಲ ಲೇಖನ : ಸಂಧ್ಯಾ ಜೈನ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.