ಭುವನೇಶ್ವರ: ಮಹಿಳೆಯರ ಸಬಲೀಕರಣದ ಉದ್ದೇಶದೊಂದಿಗೆ ಒರಿಸ್ಸಾದ ಭುವನೇಶ್ವರದಲ್ಲಿ ‘ಉಜ್ವಲ ಸ್ಯಾನಿಟರಿ ನ್ಯಾಪ್ಕಿನ್’ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ಅವರು ಚಾಲನೆಯನ್ನು ನೀಡಿದರು.
ಈ ಕಾರ್ಯಕ್ರಮದಡಿ ಒರಿಸ್ಸಾದ ಎಲ್ಲಾ 30 ಜಿಲ್ಲೆಗಳ 93 ಬ್ಲಾಕ್ಗಳಲ್ಲಿ, ತೈಲ ಮಾರುಕಟ್ಟೆ ಕಂಪನಿಗಳು ತಮ್ಮ ಕಾಮನ್ ಸರ್ವಿಸ್ ಸೆಂಟರ್ ಸಮೀಪ 100 ಸ್ಯಾನಿಟರಿ ನ್ಯಾಪ್ಕಿನ್ ತಯಾರಿಕ ಘಟಕಗಳನ್ನು ತೆರಯಲಿವೆ. ಸುಮಾರು 2.94 ಮೊತ್ತದ ಯೋಜನೆ ಇದಾಗಿದೆ.
ಮಹಿಳಾ ನೈರ್ಮಲ್ಯ, ಆರೋಗ್ಯವನ್ನು ಕಾಪಾಡುವ ಸಲುವಾಗಿ ಸ್ಯಾನಿಟರಿ ಪ್ಯಾಡ್ಗಳ ಬಳಕೆಯನ್ನು ಉತ್ತೇಜಿಸುವುದಕ್ಕಾಗಿ ಈ ಘಟಕಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಗ್ರಾಮೀಣ ಮಹಿಳೆಯರಿಗೆ ಇದು ಉದ್ಯೋಗವಕಾಶವನ್ನೂ ಒದಗಿಸಲಿದೆ. ಆರ್ಥಿಕತೆಯನ್ನೂ ಸುಧಾರಿಸಲಿದೆ.
souce: business-standred
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.